ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಜಿಮ್‌ನಲ್ಲಿ ವರ್ಕೌ‌ಟ್: ವಿಕ್ಕಿ ಕೌಶಲ್ ಫಿಟ್ನೆಸ್‌ಗೆ ಫಿದಾ ಆದ ಅಭಿಮಾನಿಗಳು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Vicky Kaushal Instagram Post screengrab

ಬೆಂಗಳೂರು: ಬಾಲಿವುಡ್ ನಟ ವಿಕ್ಕಿ ಕೌಶಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಜಿಮ‌್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಕ್ಕಿ ಕೌಶಲ್ ಫೋಟೊಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಉಗ್ರದಾಳಿಯ ವಿರುದ್ಧದ ಹೋರಾಟದ ಕಥೆ ಹೊಂದಿದ್ದ ‘ಉರಿ’ ಚಿತ್ರ ವಿಕ್ಕಿ ಕೌಶಲ್‌ಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು.

ಹೊಸ ಫೋಟೊಗೆ ವಿಕ್ಕಿ ಕೌಶಲ್, ‘WIP’ ಎಂದು ಅಡಿಬರಹ ನೀಡಿದ್ದಾರೆ. ಕೆಲಸ ಪ್ರಗತಿಯಲ್ಲಿದೆ ಎನ್ನುವ ಅರ್ಥದಲ್ಲಿ ವಿಕ್ಕಿ ಕೌಶಲ್‌ ಈ ಮಾತು ಹೇಳಿದ್ದಾರೆ.

ವಿಕ್ಕಿ ಫಿಟ್ನೆಸ್ ಕಂಡು ಬಾಲಿವುಡ್ ಮಂದಿ ಮತ್ತು ಅಭಿಮಾನಿಗಳು ಕಮೆಂಟ್ ಮೂಲಕ ಶಹಬ್ಬಾಸ್ ಹೇಳಿದ್ದಾರೆ.

ನಟ ಅಮೊಲ್ ಪರಾಶರ್, ಅಲಿಶಾ ಸಿಂಗ್, ಅಮೃತಾ ಖಾನ್ವಿಲ್ಕರ್ ಸಹಿತ ಹಲವು ಪ್ರಮುಖರು ವಿಕ್ಕಿ ಫಿಟ್ನೆಸ್‌ಗೆ ಫಿದಾ ಆಗಿದ್ದಾರೆ. ವಿಕ್ಕಿ ಫೋಟೊಗೆ 4 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು