ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಡಿಯೊ: ವಿಶೇಷ ಉಡುಗೆಯಲ್ಲಿ ಮನಸೂರೆಗೊಂಡ ನಟಿ ಕಿಯಾರಾ

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕೇವಲ ನಟಿ ಮಾತ್ರವಲ್ಲದೇ ಒಬ್ಬ ಶ್ರೇಷ್ಠ ಮಾಡೆಲ್ ಕೂಡ ಹೌದು.
Published 6 ಜುಲೈ 2024, 13:03 IST
Last Updated 6 ಜುಲೈ 2024, 13:03 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕೇವಲ ನಟಿ ಮಾತ್ರವಲ್ಲದೇ ಒಬ್ಬ ಶ್ರೇಷ್ಠ ಮಾಡೆಲ್ ಕೂಡ ಹೌದು. ಅವರು ಮಾಡೆಲಿಂಗ್ ಮಾಡುವ ಉಡುಗೆ ತೊಡುಗೆಗಳು ಫ್ಯಾಷನ್ ಜಗತ್ತಿನಲ್ಲಿ ಹೆಚ್ಚು ಸದ್ದು ಮಾಡುತ್ತವೆ.

ಅಲ್ಲದೇ ಅವರ ಮಾದಕ ನೋಟವು ಪಡ್ಡೆಹುಡುಗರಿಗೆ ಕಚಗುಳಿ ಇಡುತ್ತದೆ.

ಸದ್ಯ ಪಾರದರ್ಶಕ ಮುತ್ತಿನ ಸೀರೆಯಲ್ಲಿ ವಿಡಿಯೊ ಶೂಟ್ ಮಾಡಿಸಿರುವ ಕಿಯಾರಾ ಗಮನ ಸೆಳೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಈ ವಿಡಿಯೊ ಹಂಚಿಕೊಂಡಿದ್ದು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

ಇನ್ನು ಕಿಯಾರಾ ಅವರ ಗೇಮ್ ಚೇಂಜರ್ ಚಿತ್ರ ಈ ವರ್ಷ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಜೊತೆ ಕಿಯಾರಾ ಜೊತೆಯಾಗಿದ್ದಾರೆ.

ವಾರ್ 2 ಸಿನಿಮಾದಲ್ಲೂ ಅವರು ಅಭಿನಯಿಸುತ್ತಿದ್ದು ಈ ಚಿತ್ರ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT