ಮಂಗಳವಾರ, ಜುಲೈ 5, 2022
21 °C

IPL ಚೆನ್ನೈ ತಂಡಕ್ಕೆ ವಿಘ್ನೇಶ್ ಶಿವನ್‌ರಿಂದ ಪ್ರೋಮೋ: ಧೋನಿ ಕಂಡು ಭಾವುಕ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳು ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ಅವರು ಕ್ರಿಕೆಟಿಗ ಎಂ.ಎಸ್. ಧೋನಿ ಅವರ ಬಗ್ಗೆ ಭಾವುಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

ತನ್ನ ಜೀವನವನ್ನು ಧೋನಿ ಅವರು ಎಷ್ಟು ಪ್ರಭಾವಿಸಿದ್ದಾರೆ ಮತ್ತು ಧೋನಿ ಅಂದರೆ ತಮಗೆ ಎಷ್ಟು ಇಷ್ಟ ಎಂಬುದನ್ನು ಅವರು ಈ ಸಂದೇಶದಲ್ಲಿ ತಿಳಿಸಿದ್ದಾರೆ.

ಅಂದಹಾಗೇ ವಿಘ್ನೇಶ್ ಶಿವನ್ ಅವರು ಮುಂಬರುವ ಐಪಿಎಲ್ ಕ್ರಿಕೆಟ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ವಿಶೇಷ ವಿಡಿಯೊ ಪ್ರೋಮೋ ಸಿದ್ದಪಡಿಸುತ್ತಿದ್ದಾರೆ. ಇದರಲ್ಲಿ ಧೋನಿ ಅಭಿನಯಿಸುತ್ತಿದ್ದಾರೆ.

‘ನನಗೆ ಧೋನಿ ಅಂದರೆ ತುಂಬಾ ಇಷ್ಟ. ನಾನು ಜೀವನದಲ್ಲಿ ಮೇಲೆ ಬರಲು ಅವರೇ ನನಗೆ ಸ್ಪೂರ್ತಿ. ಅವರು ಕೇವಲ ಆಟಗಾರ ಅಲ್ಲ. ಎಂಥವರಿಗೂ ಸ್ಫೂರ್ತಿ ತುಂಬುವ ಅದ್ಭುತ ಮನುಷ್ಯ. ಅಂತವರ ಜೊತೆ ಒಂದು ಫೋಟೊ ತೆಗೆಸಿಕೊಳ್ಳಬೇಕು ಎಂಬ ಮಹದಾಸೆ ನನಗಿತ್ತು. ಆದರೆ, ಇಂದು ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದೇನೆ’ ಎಂದಿದ್ದಾರೆ.

‘2012 ರಲ್ಲಿ ನನ್ನ ತಾಯಿಗೆ ಧೋನಿ ಭೇಟಿಯಾಗುವ ಅವಕಾಶ ಕೂಡಿ ಬಂದಿತ್ತು. ಆಗ ಚೆನ್ನೈ ಐಪಿಎಲ್ ತಂಡದ ಭದ್ರತಾ ತಂಡದಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿಯನ್ನು ದೋನಿ ಅವರು ಕರೆದು ಮಾತನಾಡಿಸಿದ್ದರು. ಅವರು ಒಂದು ಫೋಟೊ ಕೂಡ ತೆಗೆಸಿಕೊಂಡಿದ್ದರು. ಆದರೆ, ನಾನು ದೂರದಲ್ಲಿ ನಿಂತು ಇದನ್ನು ನೋಡಿದ್ದಷ್ಟೇ’ ಎಂದು ಸ್ಮರಿಸಿಕೊಂಡಿದ್ದಾರೆ.

 

‘ಚೆನ್ನೈ ತಂಡಕ್ಕೆ ಪ್ರೋಮೋ ಮಾಡುವುದಕ್ಕಾಗಿ ನನಗೆ ಅವಕಾಶ ಒದಗಿ ಬಂದಿದೆ. ಇಂತಹ ಅದೃಷ್ಟವನ್ನು ನಾನೆಂದೂ ನಿರೀಕ್ಷಿಸರಿರಲಿಲ್ಲ. ಶೂಟಿಂಗ್ ಟೈಮ್‌ನಲ್ಲಿ ದೋನಿ ಅವರು ಎಷ್ಟೊಂದು ಸರಳ ಹಾಗೂ ಅದ್ಭುತ ವ್ಯಕ್ತಿ ಎಂಬುದು ಮನದಟ್ಟಾಯಿತು. ಹತ್ತು ನಿಮಿಷ ನನ್ನ ಹಾಗೂ ನನ್ನ ತಾಯಿ ಜೊತೆ ಮಾತನಾಡಿ ದೋನಿ ಅವರು ಆತ್ಮೀಯತೆ ತೋರಿದ್ದನ್ನು ಎಂದೂ ಮರೆಯಲಾಗುವುದಿಲ್ಲ’ ಎಂದು ಶಿವನ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ನಟಿ ನಯನತಾರಾ ಅವರ ಪತಿ ಆಗಿರುವ ವಿಘ್ನೇಶ್ ಶಿವನ್ ಅವರು 2012 ರಿಂದಲೂ ತಮಿಳು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದು, ‘ಪೊಡಾ–ಪೊಡಿ’, ‘ನಾನುಂ ರೌಡಿಧ್ಯಾನ್’, ‘ಪಾವಾ ಕಡೈಗಲ್’ ಸೇರಿದಂತೆ 6 ಸಿನಿಮಾಗಳನ್ನು ನಿರ್ದೇಶಿಸಿದ್ದು, ಸದ್ಯ ವಿಜಯ್ ಸೇತುಪತಿ ಅಭಿನಯದ  ಕಾಥುವಕ್ಕುಲು ರೆಂಡು ಕಾದಲ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು