ಭಾನುವಾರ, ಆಗಸ್ಟ್ 1, 2021
21 °C

ವಿಜಯ ದೇವರಕೊಂಡ ಇನ್‌ಸ್ಟಾಗ್ರಾಂ ಫಾಲೋವರ್ಸ್‌ 80 ಲಕ್ಷ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರ್ಜುನ್‌ ರೆಡ್ಡಿ, ಪೆಳ್ಳಿಚೂಪುಲು ಮತ್ತು ಗೀತ ಗೋವಿಂದಂ ಮುಂತಾದ ಬ್ಲಾಕ್‌ ಬ್ಲಸ್ಟರ್ ಚಿತ್ರಗಳ ಮೂಲಕ‌ ಹೆಚ್ಚು ಫ್ಯಾನ್‌ ಫಾಲೋವರ್ಸ್‌‌ ಹೊಂದಿರುವ ಟಾಲಿವುಡ್ ನಟ ವಿಜಯ ದೇವರಕೊಂಡ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.  

ಈ ಬಾರಿ ಅವರು ಸುದ್ದಿಯಲ್ಲಿರುವುದು ಸಾಮಾಜಿಕ ಜಾಲತಾಣಗಳ ಫಾಲೋವರ್ಸ್‌ ಸಂಖ್ಯೆಯಿಂದ. ವಿಜಯ ದೇವರಕೊಂಡ ಅವರನ್ನು‌ ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡುತ್ತಿರುವವರ ಸಂಖ್ಯೆ 80 ಲಕ್ಷ ತಲುಪಿದೆ! 

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಟಾಲಿವುಡ್‌ನ ಪ್ರಿನ್ಸ್‌ ಮಹೇಶ್‌ ಬಾಬು, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌, ರೆಬೆಲ್‌ಸ್ಟಾರ್‌‌ ಪ್ರಭಾಸ್‌, ಪವರ್‌ ಸ್ಟಾರ್ ರಾಮ್‌ ಚರಣ್‌ ತೇಜ, ಜೂನಿಯರ್‌ ಎನ್‌ಟಿಆರ್ ಅವರಂತಹ ಟಾಪ್ ಟಾಲಿವುಡ್‌‌ ಸ್ಟಾರ್‌ಗಳನ್ನು ವಿಜಯ ದೇವರಕೊಂಡ ಹಿಂದಿಕ್ಕಿದ್ದಾರೆ.

 
 
 
 

 
 
 
 
 
 
 
 
 

Until next year ❤️ Maybe..

A post shared by Vijay Deverakonda (@thedeverakonda) on

ದೇವರಕೊಂಡ ನಟಿಸಿದ ಇತ್ತೀಚಿನ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಸೋತರೂ ಅಭಿಮಾನಿಗಳ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಈಗಲೂ ಅವರು ಯುವ ಸಮೂಹದ ನಂಬರ್‌ 1 ನೆಚ್ಚಿನ ನಟ.

ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಫ್ಯಾನ್‌ ಫಾಲೋವರ್ಸ್‌ ಹೊಂದಿರುವ ಟಾಲಿವುಡ್‌ ನಟರ ಪಟ್ಟಿಯಲ್ಲಿ ಈಗ ಮೊದಲ ಸ್ಥಾನದಲ್ಲಿ ’ಡಿಯರ್‌ ಕಾಮ್ರೇಡ್’ ನಟ ಬಂದು ಕೂತಿದ್ದಾರೆ. 7.60 ಲಕ್ಷ ಫ್ಯಾನ್ ಫಾಲೋವರ್ಸ್‌ ಹೊಂದಿದ ಅಲ್ಲು ಅರ್ಜುನ್‌ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಹೇಶ್‌ ಬಾಬು (5.20 ಲಕ್ಷ), ಪ್ರಭಾಸ್ ‌(4.80 ಲಕ್ಷ),ರಾಮ್‌ ಚರಣ್‌ ತೇಜ(2.60ಲಕ್ಷ) ಮತ್ತು ಜೂನಿಯರ್‌ ಎನ್‌ಟಿಆರ್ 1.80 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ.

‘ಅರ್ಜುನ್‌ ರೆಡ್ಡಿ’ ಚಿತ್ರದ ಮೂಲಕ ಯುವ ಸಮೂಹದ ಅಚ್ಚುಮೆಚ್ಚಿನ ನಟರಾದ ವಿಜಯ ದೇವರಕೊಂಡ ಅವರು ಸದ್ಯ ಪುರಿ ಜಗನ್ನಾಥ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಕ್ಸರ್‌‌ ಕತೆ ಹೊಂದಿದ ಈ ಚಿತ್ರದ ನಾಯಕಿಯಾಗಿ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ನಟಿಸುತ್ತಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು