ಲೀಕ್‌ ಆಯ್ತು ‘ಗೀತ ಗೋವಿಂದಂ' ರೊಮ್ಯಾನ್ಸ್‌ ಸೀನ್‌: ನಟ ವಿಜಯ್‌ ಬೇಸರ

7

ಲೀಕ್‌ ಆಯ್ತು ‘ಗೀತ ಗೋವಿಂದಂ' ರೊಮ್ಯಾನ್ಸ್‌ ಸೀನ್‌: ನಟ ವಿಜಯ್‌ ಬೇಸರ

Published:
Updated:

‘ಕಿರಿಕ್‌ ಪಾರ್ಟಿ’ಯ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ‘ಅರ್ಜುನ್‌ ರೆಡ್ಡಿ’ ಖ್ಯಾತಿಯ ವಿಜಯ್‌ ದೇವರಕೊಂಡ ನಟಿಸಿರುವ ತೆಲುಗು ಸಿನಿಮಾ ‘ಗೀತ ಗೋವಿಂದಂ’ನ ಕೆಲ ದೃಶ್ಯಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. 

ಚಿತ್ರದ ಕೆಲವು ಸೀನ್‌ಗಳು ಲೀಕ್‌ ಆಗಿರುವುದರಿಂದ ಚಿತ್ರತಂಡ ತಲೆ ಕೆಡಿಸಿಕೊಂಡಿದೆ. ಇದರಲ್ಲಿ ಹಸಿ–ಬಿಸಿ ದೃಶ್ಯಗಳು ಇರುವುದರಿಂದ ನಟ–ನಟಿಯರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿ ವಿಜಯ್‌ ದೇವರಕೊಂಡ ‘ಒಂದು ಸಲ ಕೋಪ ಬರುತ್ತೆ, ಮತ್ತೊಮ್ಮೆ ಅಳು ಬರುತ್ತೆ , ತುಂಬಾ ಬೇಸರವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. 

ಚಿತ್ರದ ದೃಶ್ಯ ಸೋರಿಕೆಯ ಆರೋಪದ ಮೇಲೆ ಸಂಕಲನಕಾರನೊಬ್ಬನನ್ನು ಮತ್ತು ಅದನ್ನು ಜಾಲತಾಣದಲ್ಲಿ ಹರಿಬಿಟ್ಟ 17 ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಸೈಬರ್‌ ಅಪರಾಧ ಕಾನೂನಿನಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆಯಂತೆ.

ಈ ಘಟನೆಯಿಂದ ಬೇಸರಗೊಂಡಿರುವ ನಾಯಕ ವಿಜಯ್‌ರನ್ನು ಸಂತೈಸುವ ಪ್ರಯತ್ನವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿದ್ದಾರೆ.

‘ವಿಡಿಯೊಗಳು ಲೀಕ್‌ ಆದರೂ ಪರವಾಗಿಲ್ಲ. ನಾವು ನಿಮ್ಮ ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿಯೇ ನೋಡುತ್ತೇವೆ. ನೀವು ಎದೆಗುಂದದಿರಿ. ನಟ ಮಹೇಶ್‌ ಬಾಬು ಮತ್ತು ಪವನ್‌ ಕಲ್ಯಾಣರ ಸಿನಿಮಾಗಳ ಬಿಡುಗಡೆ ಮುನ್ನ ಈ ಹಿಂದೆ ಹೀಗೆಯೇ ಆಗಿತ್ತು’ ಎಂದು ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಭರವಸೆ ನೀಡುತ್ತಿದ್ದಾರೆ.

‌ಪರಸುರಾಮ್‌ ನಿರ್ದೇಶನ ಮಾಡಿರುವ ‘ಗೀತ ಗೋವಿಂದಂ’ ಆಗಸ್ಟ್‌ 15ಕ್ಕೆ ಸಿನಿ ಮಂದಿರಗಳಿಗೆ ಬರುತ್ತಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !