ಭಾನುವಾರ, ಸೆಪ್ಟೆಂಬರ್ 26, 2021
21 °C

ಐಷಾರಾಮಿ ಮನೆ ಖರೀದಿಸಿದ ಕಾಮ್ರೇಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಅರ್ಜನ್ ರೆಡ್ಡಿ’ ಮೂಲಕ ಟಾಲಿವುಡ್‌ನಲ್ಲಿ ಭರ್ಜರಿ ಎಂಟ್ರಿ ಕೊಟ್ಟ ವಿಜಯ್‌ ದೇವರಕೊಂಡ ಈಗ ಸ್ಟಾರ್‌ ನಟ. ಕೆಲವೇ ವರ್ಷಗಳಲ್ಲಿ ಬಹು ದೊಡ್ಡ ಯುವ ಅಭಿಮಾನಿ ಬಳಗ ಹೊಂದಿದ ವಿಜಯ್ ಇತ್ತೀಚೆಗೆ ₹15 ಕೋಟಿ ಮನೆ ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಹೈದರಾಬಾದ್‌ನ ಪ್ರತಿಷ್ಠಿತ ಜ್ಯೂಬಿಲಿ ಹಿಲ್ಸ್‌ನಲ್ಲಿ ಮನೆ ಖರೀದಿಸಿರುವ ವಿಜಯ್‌ ಗೃಹಪ್ರವೇಶದ ಚಿತ್ರಗಳನ್ನು ಟಿಟ್ವರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬ ಸದಸ್ಯರು ಹಾಗೂ ಆತ್ಮೀಯ ಸ್ನೇಹಿತರ ಜೊತೆ ಹೊಸ ಮನೆಯಲ್ಲಿ ತೆಗೆಸಿಕೊಂಡ ಫೋಟೊಗಳನ್ನು ಕೂಡ ‘ಡಿಯರ್ ಕಾಮ್ರೆಡ್’ ಅಪ್‌ಲೋಡ್ ಮಾಡಿದ್ದಾರೆ.

‘ನಾನು ಭವ್ಯವಾದ ದೊಡ್ಡ ಮನೆ ಖರೀದಿಸಿದ್ದೇನೆ, ಈ ಮನೆ ನನಗೆ ಭಯ ಹುಟ್ಟಿಸುತ್ತಿದೆ. ಈ ಮನೆಯನ್ನು ಬೆಳಗಿಸಿ, ಭಯದ ಭಾವನೆ ಹೋಗಲಾಡಿಸಲು ಅಮ್ಮನಿಂದ ಸಾಧ್ಯ’ ಎಂದು ತಾಯಿಯೇ ನಮ್ಮ ಮನೆಯ ದೀಪ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.  

‘ದೊರೆಸಾನಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ವಿಜಯ್‌ ಸಹೋದರ ಆನಂದ್ ದೇವರಕೊಂಡ ಅವರು ತಮ್ಮ ಹೊಸ ಮನೆಯಲ್ಲಿ ಸ್ನೇಹಿತರ ಜೊತೆ ತೆಗೆಸಿಕೊಂಡ ಚಿತ್ರಗಳನ್ನು ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಸದ್ಯಕ್ಕೆ ಕ್ರಾಂತಿ ಮಹದೇವ್ ನಿರ್ದೇಶನದ ‘ವರ್ಲ್ಡ್‌ ಫೇಮಸ್ ಲವರ್’ ಸಿನಿಮಾದ ಬಿಡುಗಡೆಗೆ ವಿಜಯ್ ಕಾಯುತ್ತಿದ್ದಾರೆ. ಈ ಚಿತ್ರ ಫೆಬ್ರುವರಿ 14ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ ಆನಂದ್ ಅಣ್ಣಾಮಲೈ ನಿರ್ದೇಶನದ ತಮಿಳು–ತೆಲುಗು ದ್ವಿಭಾಷಾ ಚಿತ್ರವೊಂದರಲ್ಲೂ ವಿಜಯ್ ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು