ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಾಳೆ (ಫೆಬ್ರುವರಿ 26) ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ತಾರಾ ಜೋಡಿಯ ಮದುವೆಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ಇದರ ನಡುವೆ ವಿಜಯ್ ದೇವರಕೊಂಡ ಅವರ ತಾಯಿ ಸೊಸೆ ಹೇಗಿರಬೇಕು ಎಂದು ಮಾತನಾಡಿರುವ ವಿಡಿಯೊ ತುಣುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
.Marriage Vibes: ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ ವಯಸ್ಸಿನ ಅಂತರ ಎಷ್ಟು?.ನಟ ವಿಜಯ್ ದೇವರಕೊಂಡ ಕಾರು ಅಪಘಾತ: ಕೂದಲೆಳೆಯ ಅಂತರದಲ್ಲಿ ಪಾರು.
ಈ ಹಿಂದೆ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಗೀತಾ ಗೋವಿಂದಂ’ ಚಿತ್ರದ ಸಕ್ಸಸ್ ಕಾರ್ಯಕ್ರಮದಲ್ಲಿ ತಾಯಿ ಮಾಧವಿ ಅವರು ಹೇಳಿಕೆ ಒಂದನ್ನು ನೀಡಿದ್ದರು. ಈಗ ಆ ಕಾರ್ಯಕ್ರಮದ ವಿಡಿಯೊ ಹರಿದಾಡುತ್ತಿದೆ.

ಆ ವಿಡಿಯೊದಲ್ಲಿ ನಿರೂಪಕಿ ಸುಮಾ ಕನಕಾಲ, ವಿಜಯ್ ಅವರ ಪೋಷಕರ ಬಳಿ ಮದುವೆ ವಿಚಾರದ ಬಗ್ಗೆ ಪ್ರಸ್ತಾಪಿಸಿದರು. ‘ವಿಜಯ್ಗೆ ಮದುವೆ ಆಗುವ ಹುಡುಗಿ, ಅಂದರೆ ನಿಮಗೆ ಯಾವ ರೀತಿಯ ಸೊಸೆ ಬೇಕು’ ಎಂದು ವಿಜಯ್ ತಾಯಿ ಮಾಧವಿ ಅವರಿಗೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಅವರು ‘ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳುವ ಸೊಸೆ ಬೇಕು. ಅವಳು ಅವನನ್ನು ಯಾವುದೇ ಷರುತ್ತು ಇಲ್ಲದೆ ಪ್ರೀತಿಸಬೇಕು ಅಷ್ಟೇ. ಅವನು ಸಿನಿಮಾ ಉದ್ಯಮದಲ್ಲಿದ್ದಾನೆ. ಆದ್ದರಿಂದ ಸೊಸೆ ಅವನನ್ನು ಅರ್ಥಮಾಡಿಕೊಳ್ಳುವ ಹುಡುಗಿಯಾಗಿರಬೇಕು’ ಎಂದಿದ್ದರು.

ಬಳಿಕ ಮಾತನಾಡಿದ ವಿಜಯ್ ಅವರ ತಂದೆ ಗೋವರ್ಧನ್ ರಾವ್, ‘ಅವನು ಯಾರನ್ನು ಬೇಕಾದರೂ ಮದುವೆಯಾಗಲಿ. ನನಗೆ ಜಾತಿ ಅಥವಾ ಧರ್ಮದ ಬಗ್ಗೆ ಕಾಳಜಿ ಇಲ್ಲ. ಆದರೆ ಅವನು ವಿಶೇಷವಾಗಿ ದಕ್ಷಿಣ ಭಾರತೀಯ ಹುಡುಗಿಯನ್ನು ಮದುವೆಯಾದರೆ ನನಗೆ ಸಂತೋಷವಾಗುತ್ತದೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.