ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸ್ಪಂದನಾ.. ಹೆಸರಿಗೆ ತಕ್ಕ ಜೀವ' ಅಗಲಿದ ಪತ್ನಿಗೆ ನಟ ವಿಜಯ್ ರಾಘವೇಂದ್ರ ನುಡಿನಮನ

ಪತ್ನಿ ಸ್ಪಂದನಾ ಅವರಿಗೆ ವಿಡಿಯೊ ಮೂಲಕ ವಿಜಯ್ ರಾಘವೇಂದ್ರ ನುಡಿನಮನ
Published 18 ಆಗಸ್ಟ್ 2023, 10:39 IST
Last Updated 18 ಆಗಸ್ಟ್ 2023, 10:39 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಪಂದನಾ.. ಹೆಸರಿಗೆ ತಕ್ಕ ಜೀವ..‘ ಹೀಗೆಂದು ನಟ ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿ ಸ್ಪಂದನಾ ಅವರನ್ನು ಸ್ಮರಿಸಿದ್ದಾರೆ.

ಪತ್ನಿಗೆ ವಿಡಿಯೊ ಮೂಲಕ ನುಡಿನಮನ ಸಲ್ಲಿಸಿರುವ ಅವರು, ತಮ್ಮ raagu.vijay ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅದನ್ನು ಹಂಚಿಕೊಂಡಿದ್ದಾರೆ.

ಸ್ಪಂದನಾ ಅವರು ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ಆಗಸ್ಟ್ 6 ರಂದು ಹೃದಯಾಘಾತದಿಂದ ನಿಧನರಾಗಿದ್ದರು.

ಪತ್ನಿಯ ಮರಣೋತ್ತರ ಕ್ರಿಯಾವಿಧಿಗಳನ್ನು ಮುಗಿಸಿದ ನಂತರ ವಿಜಯ್ ರಾಘವೇಂದ್ರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪತ್ನಿ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ‌. ಪತ್ನಿಯ ಕುರಿತು ತಮ್ಮ ಮನದಲ್ಲಿರುವ ಸಾಲುಗಳಿಗೆ ಧ್ವನಿ ನೀಡಿ ವಿಡಿಯೊ ಹಂಚಿಕೊಂಡಿರುವ ವಿಜಯ್ ರಾಘವೇಂದ್ರ ಪತ್ನಿ ಮೇಲಿನ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

‘ಸ್ಪಂದನಾ.. ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ‘

‘ಅಳತೆಗೆ ತಕ್ಕ ನುಡಿ, ಬದುಕಿಗೆ ತಕ್ಕ ನಡೆ'

‘ನಮಗೆಂದೇ ಮಿಡಿದೆ ನಿನ್ನ ಹೃದಯವ, ನಿಲ್ಲದು ನಿನ್ನೊಂದಿಗಿನ ಕಲರವ‘

‘ನಾನೆಂದೂ ನಿನ್ನವ, ಕೇವಲ‌ ನಿನ್ನವ, ಚಿನ್ನ, ನಿನ್ನನ್ನೇ ಉಸಿರಾಡುತ್ತಿದ್ದೇನೆ ಎಂದು ಪತ್ನಿಯನ್ನು ನೆನೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT