ಬುಧವಾರ, ಜೂನ್ 3, 2020
27 °C

ಕಮಲ ಹಾಸನ್ ಹೊಸ ಚಿತ್ರ ‘ತಲೈವಾ ಇರುಕ್ಕಿರನ್‌’ನಲ್ಲಿ ವಿಜಯ್‌ ಸೇತುಪತಿ ನಟನೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕಮಲ ಹಾಸನ್‌ ಅವರ ಮುಂದಿನ ಚಿತ್ರ ‘ತಲೈವಾ ಇರುಕ್ಕಿರನ್‌’ನಲ್ಲಿ ನಟ ವಿಜಯ್‌ ಸೇತುಪತಿ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಈ ಹೊಸ ಚಿತ್ರವು 1992ರಲ್ಲಿ ಬಿಡುಗಡೆಗೊಂಡ, ಬ್ಲಾಕ್‌ಬಸ್ಟರ್‌ ಹಿಟ್‌ ಚಿತ್ರ ‘ದೇವರ್‌ ಮಗನ್‌’ ಸಿನಿಮಾದ ಸೀಕ್ವೆಲ್‌ ಆಗಿದ್ದು, ಸಿನಿಮಾದಲ್ಲಿ ವಿಜಯ್‌ ಸೇತುಪತಿ ನಟ ನಾಸರ್‌ ಅವರ ಪುತ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಐದು ವರ್ಷಗಳ ಹಿಂದೆಯೇ ಈ ಚಿತ್ರದ ಬಗ್ಗೆ ಕಮಲ ಹಾಸನ್‌ ಘೋಷಿಸಿದ್ದರು. ಈ ಸೀಕ್ವೆಲ್‌ ಚಿತ್ರಕ್ಕೆ ‘ತಲೈವಾ ಇರುಕ್ಕಿರನ್’ ಎಂದು ಟೈಟಲ್‌ ಇಟ್ಟಿರುವುದಾಗಿಯೂ ತಿಳಿಸಿದ್ದರು. ಆದರೆ ಅನೇಕ ಕಾರಣಗಳಿಂದ ಈ ಚಿತ್ರ ಸೆಟ್ಟೇರಲಿಲ್ಲ. ಕಮಲಹಾಸನ್‌ ಕೂಡ ಬೇರೆ ಬೇರೆ ಚಿತ್ರ, ರಾಜಕಾರಣದಲ್ಲಿ ಬ್ಯುಸಿಯಾಗಿದ್ದರಿಂದ ಈ ಚಿತ್ರದ ಕೆಲಸಗಳು ಮುಂದುವರಿಯಲಿಲ್ಲ.

ಕಮಲಹಾಸನ್‌ ಹಾಗೂ ವಿಜಯ್‌ ಸೇತುಪತಿ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದು, ಈ ಚಿತ್ರದಲ್ಲಿ ನಟಿಸಲು ವಿಜಯ್ ಸೇತುಪತಿ ಆಸಕ್ತಿ ತೋರಿಸಿದ್ದಾರೆ. ‘ದೇವರ್ ಮಗನ್‌’ ಚಿತ್ರದಲ್ಲಿ ವಿಲನ್‌ ಆಗಿ ನಟಿಸಿದ್ದ ನಾಸರ್‌ನ ಮಗನಾಗಿ ’ತಲೈವಾ ಇರುಕ್ಕಿರನ್’ ಚಿತ್ರದಲ್ಲಿ ವಿಜಯ್‌ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ‘ತಲೈವಾ ಇರುಕ್ಕಿರನ್‌’ ಚಿತ್ರದಲ್ಲಿ ತಾನೂ ನಟಿಸುತ್ತಿರುವುದಾಗಿ ನಟ ವಡಿವೇಲು ಸಹ ಹೇಳಿಕೊಂಡಿದ್ದಾರೆ. ಕಮಲಹಾಸನ್‌, ವಿಜಯ್‌ ಸೇತುಪತಿ, ವಡಿವೇಲು ಹೊರತುಪಡಿಸಿ ಸಿನಿಮಾ ಪಾತ್ರವರ್ಗದ ಬಗ್ಗೆ ಚಿತ್ರತಂಡ ಏನೂ ಮಾಹಿತಿ ಬಹಿರಂಗಪಡಿಸಿಲ್ಲ.

ಈ ಚಿತ್ರಕ್ಕೆ ಲೈಕಾ ಪ್ರೊಡಕ್ಷನ್ಸ್‌ ಹಾಗೂ ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಬಂಡವಾಳ ಹೂಡಲಿದೆ. ಈ ಸಿನಿಮಾವು ಬಿಗ್‌ ಬಜೆಟ್‌ ಸಿನಿಮಾವಾಗಿದ್ದು, ಜಾತಿ, ಶಿಕ್ಷಣ ವ್ಯವಸ್ಥೆ, ಆರ್ಥಿಕತೆ, ರಾಜಕೀಯ ಅಸ್ಥಿರತೆ ಬಗ್ಗೆ ಚಿತ್ರಕತೆ ಇರಲಿದೆ.

ಕಮಲಹಾಸನ್‌ ನಾಯಕನಾಗಿ ನಟಿಸಿದ್ದ ‘ದೇವರ್‌ ಮಗನ್‌’ ಚಿತ್ರವನ್ನು ಭರತನ್‌ ನಿರ್ದೇಶನ ಮಾಡಿದ್ದರು. ಇದರಲ್ಲಿ ಶಿವಾಜಿ ಗಣೇಶನ್‌, ಗೌತಮಿ, ನಾಸರ್‌, ರೇವತಿ, ವಡಿವೇಲು ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು