ಗುರುವಾರ , ಸೆಪ್ಟೆಂಬರ್ 23, 2021
20 °C

ಹಿಂದಿಯಲ್ಲಿ ಶಾಹಿದ್ ಕಪೂರ್ ಜೊತೆ ನಟಿಸಲು ಅಣಿಯಾದ ವಿಜಯ್ ಸೇತುಪತಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು; ತಮಿಳು ನಟ ವಿಜಯ್ ಸೇತುಪತಿ ಅವರು ಬಾಲಿವುಡ್‌ನ ಶಾಹಿದ್ ಕಪೂರ್ ಜೊತೆ ನಟಿಸಲು ಅಣಿಯಾಗಿದ್ದಾರೆ. 

ಹಿಂದಿಯ ‘ಗೊ ಗೋವಾ ಗೋನ್’, ‘ಹ್ಯಾಪಿ ಎಂಡಿಂಗ್’ ಖ್ಯಾತಿಯ ರಾಜ್ ಆ್ಯಂಡ್ ಡಿಕೆ (ರಾಜ್ ನಿಧಿಮೋರು ಮತ್ತು ಕೃಷ್ಣ ಡಿಕೆ) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಥ್ರಿಲ್ಲರ್ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸುವುದು ಪಕ್ಕಾ ಆಗಿದೆ‌.

ಈ ವಿಷಯವನ್ನು ರಾಜ್ ಆ್ಯಂಡ್ ಡಿಕೆ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ' Makkal Selvan in da House'' ಎಂದು ತಮ್ಮ ನಿರ್ದೇಶನದ ಸಿನಿಮಾಕ್ಕೆ ಸ್ವಾಗತ ಕೋರಿದ್ದಾರೆ. ಈ ಸಿನಿಮಾ ಅಮೇಜಾನ್ ಫ್ರೈಮ್‌ಗಾಗಿ ನಿರ್ಮಾಣವಾಗುತ್ತಿದೆ.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಶಾಹಿದ್ ಕಪೂರ್, ರಾಶಿ ಕನ್ನಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ರಾಶಿ ಕನ್ನಾ ಹಾಗೂ ಶಾಹಿದ್ ಕಪೂರ್ ವಿಜಯ್ ಸೇತುಪತಿಯವರನ್ನು ಸ್ವಾಗತಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

 

ಇದನ್ನೂ ಓದಿ: ಸ್ನೇಹಿತರ ದಿನ: ಅಭಿಮಾನಿಗಳಿಗೆ ’ದೋಸ್ತಿ’ ಹಾಡಿನ ಗಿಫ್ಟ್‌ ಕೊಟ್ಟ ‘RRR’ ಚಿತ್ರತಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು