ಶನಿವಾರ, ಅಕ್ಟೋಬರ್ 8, 2022
21 °C

Vikram Vedha Trailer: ರಕ್ತಸಿಕ್ತ ಕಥಾನಕಕ್ಕೆ ಹೃತಿಕ್‌, ಸೈಫ್‌ ಮೆರುಗು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೃತಿಕ್ ರೋಷನ್ ಮತ್ತು ಸೈಫ್ ಆಔಲಿ ಖಾನ್ ಅಭಿನಯದ ‘ವಿಕ್ರಮ್ ವೇದಾ’ ಚಿತ್ರದ ಟ್ರೇಲರ್‌ ಗುರುವಾರ ಬಿಡುಗಡೆಯಾಗಿದೆ. 

ಕ್ರೈಮ್‌ ಥ್ರಿಲ್ಲರ್‌ ಚಿತ್ರವೊಂದರಿಂದ ನಿರೀಕ್ಷಿಸಬಹುದಾದ ಎಲ್ಲ ಅಂಶಗಳನ್ನೂ ಈ ಟ್ರೇಲರ್‌ ಒಳಗೊಂಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. 

ಮೈನವಿರೇಳಿಸುವ ಆ್ಯಕ್ಷನ್‌ ಸೀಕ್ವೆನ್ಸ್‌ಗಳು, ಹೊಡೆದಾಟದ ದೃಶ್ಯಗಳು ಟ್ರೇಲರ್‌ಗೆ ಮೆರುಗು ನೀಡಿವೆ. 

ಸೈಫ್ ಹಾಗೂ ಹೃತಿಕ್ ಮುಖಾಮುಖಿಯಾಗಿರುವ ದೃಶ್ಯಗಳು ರೋಮಾಂಚನಕಾರಿಯಾಗಿ ಮೂಡಿಬಂದಿವೆ. ಸುಮಾರು ಮೂರು ನಿಮಿಷಗಳ ಟ್ರೇಲರ್‌ನಲ್ಲಿ ಹಿನ್ನೆಲೆ ಸಂಗೀತ ಹೈಲೈಟ್‌ ಎಂದೇ ಹೇಳಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿರುವ ಟ್ರೇಲರ್ ಸಿನಿಪ್ರಿಯರಿಗೆ ಮೆಚ್ಚುಗೆಯಾಗಿದೆ. ರಕ್ತಸಿಕ್ತ ಕಥಾನಕವೊಂದನ್ನು ಬಿಚ್ಚಿಡುವ ‘ವಿಕ್ರಮ್‌ ವೇದ’ ತಮಿಳಿನ ರಿಮೇಕ್‌ ಚಿತ್ರ. 

ಮೂಲ ಚಿತ್ರವನ್ನು ನಿರ್ದೇಶಿಸಿದ ಪುಷ್ಕರ್ ಮತ್ತು ಗಾಯತ್ರಿ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ 30ರಂದು ಈ ಸಿನಿಮಾ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಹಿಂದಿ ಚಿತ್ರಗಳಿಗೆ ಬಹಿಷ್ಕಾರ ಹೇಳುತ್ತಿರುವ ಸಂದರ್ಭದಲ್ಲಿ ‘ವಿಕ್ರಮ್‌ ವೇದ’ ಬಿಡುಗಡೆಯಾಗುತ್ತಿರುವುದು ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು