ಗುರುವಾರ , ಮೇ 19, 2022
20 °C

‘ವಿಕ್ರಾಂತ್‌ ರೋಣ’ನಿಗೆ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಡೀಲ್‌!?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ವಿಕ್ರಾಂತ್‌ ರೋಣ ಸಿನಿಮಾದ ವಿದೇಶಿ ವಿತರಣೆಗೆ ಭರ್ಜರಿ ಡೀಲ್‌ ನಡೆದಿದೆ. ವಿದೇಶದಲ್ಲಿ ಈ ಚಿತ್ರದ ವಿತರಣೆಯ ಹಕ್ಕನ್ನು ಒನ್‌ ಟ್ವೆಂಟಿ 8 ಮೀಡಿಯಾ ಸಂಸ್ಥೆ ಖರೀದಿಸಿದೆ. ಭರ್ಜರಿ ಮೊತ್ತಕ್ಕೆ ಚಿತ್ರ ಮಾರಾಟವಾಗಿದೆ ಎಂದು ‘ವಿಕ್ರಾಂತ್‌ ರೋಣ’ ತಂಡ ಟ್ವೀಟ್‌ ಮಾಡಿದೆ. 

ಮೂಲಗಳು ಹೇಳುವ ಪ್ರಕಾರ, ಸುಮಾರು ₹ 10 ಕೋಟಿ ಎನ್ನಲಾಗುತ್ತಿದೆ. ಆದರೆ, ಇದನ್ನು ನಿರ್ಮಾಣ ಸಂಸ್ಥೆ ಶಾಲಿನಿ ಆರ್ಟ್ಸ್ ಅಥವಾ ನಿರ್ಮಾಪಕ ಜಾಕ್‌ ಮಂಜು ಇನ್ನೂ ಖಚಿತಪಡಿಸಿಲ್ಲ.  

ಮೇ 3ನೇ ವಾರದಿಂದ ವಿಕ್ರಾಂತ್‌ ರೋಣದ ಪ್ರಚಾರ ಆರಂಭವಾಗಲಿದೆ. ಜುಲೈ 28ಕ್ಕೆ ಚಿತ್ರ 3ಡಿ ಯಲ್ಲಿ ಬಿಡುಗಡೆ ಆಗಲಿದೆ. 

ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಸಿಂಬು, ಮಲಯಾಳಂನಲ್ಲಿ ಮೋಹನ್ ಲಾಲ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಇಂಗ್ಲಿಷ್‌ನಲ್ಲಿ ವೀರೇಂದ್ರ ಸೆಹ್ವಾಗ್ ಅವರು ಚಿತ್ರದ ಟೀಸರನ್ನು ಏ. 2ರಂದು ಬಿಡುಗಡೆ ಮಾಡಿದ್ದರು.

ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಅವರು ಚಿತ್ರದ ನಿರ್ಮಾಪಕರು. ಅನೂಪ್‌ ಭಂಡಾರಿ ನಿರ್ದೇಶನವಿದೆ. ಬಿ. ಅಜನೀಶ್‌ ಲೋಕನಾಥ್‌ ಅವರ ಕಿಚ್ಚ ಸುದೀಪ್ ಜೊತೆ ನೀತಾ ಅಶೋಕ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫೆರ್ನಾಂಡಿಸ್‌ ನಟಿಸಿದ್ದಾರೆ. ದುಬೈನ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ಚಿತ್ರದ ಶೀರ್ಷಿಕೆ ಬಿಡುಗಡೆ ನಡೆದಿತ್ತು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು