ಮಂಗಳೂರು: ರಾಧಾ ನಿಸರ್ಗ ಕಂಬೈನ್ಸ್ ಲಾಂಛನದಲ್ಲಿ ತಯಾರಾದ ನವೀನ್ ಮಾರ್ಲ ಕೊಡಂಗೆ ನಿರ್ದೇಶನದ ರಾಜೇಂದ್ರ ಯಶು ಬೆದ್ರೋಡಿ ನಿರ್ಮಾಣದ ‘ವಿಕ್ರಾಂತ್’ ತುಳು ಸಿನಿಮಾ ನ. 12 ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ.

ಮಂಗಳೂರಿನ ಬಿಗ್ ಸಿನಿಮಾಸ್, ಪಿ.ವಿ.ಆರ್., ಸಿನಿ ಪೊಲೀಸ್, ಉಡುಪಿಯ ಕಲ್ಪನಾ, ಕಾರ್ಕಳದ ರಾಧಿಕಾ, ಮಣಿಪಾಲದ ಭಾರತ್ ಮಾಲ್, ಬೆಳ್ತಂಗಡಿಯ ಭಾರತ್ ಸಿನಿಮಾ ಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ‘ವಿಕ್ರಾಂತ್’ ಸಿನಿಮಾಕ್ಕೆ ಸುಮಾರು 35 ದಿನಗಳ ಕಾಲ ಬಂಟ್ವಾಳ ಪರಿಸರ, ಕಳಸ, ಹೊರ ನಾಡು, ಉಪ್ಪಿನಂಗಡಿ, ಬಿ.ಸಿ ರೋಡ್ ಮೊದಲಾದೆಡೆ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕ ನವೀನ್ ಮಾರ್ಲ ಕೊಡಂಗೆ ತಿಳಿಸಿದ್ದಾರೆ.

ಈ ಸಿನಿಮಾದಲ್ಲಿ ಬಹುತೇಕ ಯಕ್ಷಗಾನ ಕಲಾವಿದರು ಬಣ್ಣ ಹಚ್ಚಿದ್ದು ವಿಶೇಷ. ಖ್ಯಾತ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರು ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಯಕ್ಷಗಾನ ಕಲಾವಿದರಾದ ರಾಧಾಕೃಷ್ಣ ನಾವಡ ಮಧೂರು, ಬಂಟ್ವಾಳ ಜಯರಾಮ ಆಚಾರ್ಯ, ಕಡಬ ದಿನೇಶ್ ರೈ, ಕೋಡ ಪದವು ದಿನೇಶ್ ಶೆಟ್ಟಿಗಾರ್, ಪೂರ್ಣಿಮಾ ಯತೀಶ್ ರೈ ಅಭಿನಯಿಸಿದ್ದಾರೆ.

ರಂಗಭೂಮಿಯ ಅರವಿಂದ ಬೋಳಾರ್, ರಮೇಶ್ ರೈ ಕುಕ್ಕುವಳ್ಳಿ, ಎಚ್.ಕೆ ನಯನಾಡು, ಕೊಡಮಣ್ ಕಾಂತಪ್ಪ ಶೆಟ್ಟಿ, ಅಶೋಕ್ ಭಟ್ ಕಾಪುಕೊಲ್ಯ, ಸುನೀಲ್ ಕೆ.ಆರ್., ಸಂದೀಪ್ ಶೆಟ್ಟಿ ರಾಯಿ, ರಾಕೇಶ್ ಶೆಟ್ಟಿ, ಬಿ.ಸಿ. ರೋಡ್, ಸುನೀತಾ ಎಕ್ಕೂರ್, ಪವಿತ್ರಾ ಹೆಗ್ಡೆ, ಶ್ರುತಿ ಭಟ್ ಕಾಸರಗೋಡು, ಅಕ್ಷಯ ಕೊಡ್‌ಮನ್ ಇದ್ದಾರೆ. ನಾಯಕ ನಟನಾಗಿ ವಿನೋದ್ ಶೆಟ್ಟಿ ಮತ್ತು ನಾಯಕಿಯಾಗಿ ಶೀತಲ್ ನಾಯಕ್ ಅಭಿನಯಿಸಿದ್ದಾರೆ. ಸಿನಿಮಾಕ್ಕೆ ರವಿ ಸುವರ್ಣ ಛಾಯಾ ಗ್ರಹಣ ಒದಗಿಸಿದ್ದಾರೆ. ಎಚ್.ಕೆ ನಯನಾಡು ಸಾಹಿತ್ಯ, ವಿನೋದ್ ರಾಜ್ ಬಂಟ್ವಾಳ, ಅನಿಲ್ ನಾಯಕ್ ಅವರ ನೃತ್ಯ ನಿರ್ದೇಶನ, ಮಹಾಬಲೇಶ್ವರ ಹೊಳ್ಳರ ಸಂಕಲನ, ದಿನೇಶ್ ಸುವರ್ಣ ರಾಯಿ ಅವರ ಕಲೆ ಇದೆ.

ಯುನಿಟ್ ಜಿ.ಆರ್.ಕೆ ಸುರತ್ಕಲ್, ಭಾಸ್ಕರ್ ರಾವ್ ಬಿಸಿ ರೋಡ್ ಅವರ ಸಂಗೀತ ಸಾಹಿತ್ಯವಿದ್ದು, ಧ್ವನಿ ಮುದ್ರಣವನ್ನು ಬಿಸಿ ರೋಡ್‌ನ ವೈಭವಿ ಆಡಿಯೊ ಸ್ಟುಡಿಯೊದಲ್ಲಿ ಮಾಡಲಾಗಿದೆ. ಈ ಸಿನಿಮಾಕ್ಕೆ ಅನುರಾಧಾ ಭಟ್, ಭಾಸ್ಕರ್ ರಾವ್ ಹಾಗೂ ಯಕ್ಷಗಾನ ಭಾಗವತ ಗಿರೀಶ್ ರೈ ಕಕ್ಕೆಪದವು ಹಾಡಿದ್ದಾರೆ. ಕಥೆ ಸಂಭಾಷಣೆ ನಿರ್ದೇಶನ ನವೀನ್ ಮಾರ್ಲ ಕೊಡಂಗೆ. ಸಹಾಯಕ ನಿರ್ದೇಶನ ಪುಷ್ಪರಾಜ್ ರೈ ಮಲಾರ್ ಬೀಡು, ಜಯರಾಜ್ ಹೆಜಮಾಡಿ ಅವರದ್ದಿದೆ.

ತನ್ನ ಸಂಸಾರದ ಬಗ್ಗೆ ಚಿಂತಿಸದೆ, ಸಮಾಜ ಸೇವೆಗೆ ತನ್ನ ಸರ್ವಸ್ವವನ್ನು ಮುಡಿಪಾಗಿಸುವ ಯುವಕನ ಜೀವನದಲ್ಲಿ ನಡೆಯುವ ಘಟನೆಗಳನ್ನು ಬಿಂಬಿಸುವ ಕತೆಯನ್ನು ವಿಕ್ರಾಂತ್ ಚಿತ್ರ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.