ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಜೊತೆ ಪ್ರಕೃತಿ ಸುತ್ತಾಟ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ ವಿರಾಟ್‌ ಕೊಹ್ಲಿ

Last Updated 25 ಜೂನ್ 2020, 16:25 IST
ಅಕ್ಷರ ಗಾತ್ರ

ಈ ಲಾಕ್‌ಡೌನ್‌ ಅವಧಿಯಲ್ಲಿ ಕ್ರಿಕೆಟಿಗ ವಿರಾಟ್‌ ಕೊಹ್ಲಿ ತಮ್ಮ ಮುದ್ದಿನ ಪತ್ನಿ ಅನುಷ್ಕಾ ಶರ್ಮಾ ಜೊತೆ ಪ್ರಕೃತಿ ಸುತ್ತಾಟವನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದಾರಂತೆ.

ವಿರಾಟ್‌ ಇನ್‌ಸ್ಟಾಗ್ರಾಂನಲ್ಲಿ ಅನುಷ್ಕಾ ಜೊತೆಗೆ ಸರೋವರದ ಮುಂದೆ ಕುಳಿತಿರುವ ಹಳೆಯ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಫೋಟೊ ಜತೆಗೆ ‘ಮತ್ತೆ ಯಾವಾಗ ಪ್ರಕೃತಿ ಹತ್ತಿರ ಹೋಗುವುದು. ನನ್ನ ಪ್ರೀತಿಯ ಜೊತೆ ಒಟ್ಟಿಗೆ ಕುಳಿತು ಎಲ್ಲಾ ಹಂಚಿಕೊಳ್ಳಬೇಕು’ ಎಂದು ಬರೆದುಕೊಂಡಿದ್ದಾರೆ.

ಈ ಫೋಟೊದಲ್ಲಿ ವಿರಾಟ್‌, ಅನುಷ್ಕಾ ಸರೋವರದ ತುದಿಯಲ್ಲಿ ಕುಳಿತಿದ್ದು, ಅವರ ಮುಂದೆ ಹಿಮದಿಂದ ಆವೃತವಾದ ಬೆಟ್ಟಗಳ ಸಾಲುಗಳಿವೆ. ದೃಶ್ಯ ನಯನ ಮನೋಹರವಾಗಿದೆ. ಅದು ಯಾವ ಸ್ಥಳ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿಲ್ಲ. ಪೋಸ್ಟ್‌ನ್ನು 30 ಲಕ್ಷ ಜನ ಇಷ್ಟಪಟ್ಟಿದ್ದಾರೆ.

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿ ಒಟ್ಟಿಗೆ ಕಾಲ ಕಳೆಯುತ್ತಿರುವ ಈ ದಂಪತಿ, ಸಿನಿಮಾ ವೀಕ್ಷಿಸುತ್ತಾ, ಮನೆಯಲ್ಲಿ ಕ್ರಿಕೆಟ್‌ ಆಡುತ್ತಾ ಕಾಲ ಕಳೆಯುತ್ತಿದ್ದಾರಂತೆ. ಈ ದಂಪತಿ ಸೋಶಿಯಲ್‌ ಮೀಡಿಯಾಗಳಲ್ಲಿ ಆ್ಯಕ್ಟಿವ್‌ ಆಗಿದ್ದು, ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅನುಷ್ಕಾ ನಿರ್ಮಾಣದ ‘ಬುಲ್‌ಬುಲ್‌’ ವೆಬ್‌ಸರಣಿಯು ನೆಟ್‌ ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಇದು ಫ್ಯಾಂಟಸಿ ಕತೆಯನ್ನೊಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT