ಶುಕ್ರವಾರ, ಜೂಲೈ 3, 2020
21 °C

ವಿರಾಟ ಪರ್ವಂ: ಸಾಯಿಪಲ್ಲವಿಯ ಫಸ್ಟ್ ಲುಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹೀರೊಗಳ ಜೊತೆಗೆ ನಟನೆಗಷ್ಟೇ‌ ಕೆಲವು ನಟಿಯರು ಸೀಮಿತರಾಗಿರುತ್ತಾರೆ.‌ ಮತ್ತೆ ಕೆಲವು ನಟಿಯರು ಹೀರೊ ಜೊತೆಗೆ ನಟಿಸುತ್ತಲೇ ತಮ್ಮೊಳಗಿನ ಪ್ರತಿಭೆಯ ಪ್ರದರ್ಶನಕ್ಕೂ ಒತ್ತು ನೀಡುತ್ತಾರೆ. ನಟಿ ಸಾಯಿಪಲ್ಲವಿ ಅವರದ್ದು ಇದೇ ಹಾದಿಯ ಪಯಣ. ಆಕೆ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ. ನಟನಾ ಸಾಮರ್ಥ್ಯ ಬೇಡುವ‌ ಸಿನಿಮಾಗಳಿಗೆ ಆಕೆಯದ್ದು‌ ಪ್ರಧಾನ ಆದ್ಯತೆ.

ತೆಲುಗಿನ ರಾನಾ ದಗ್ಗುಬಾಟಿ ನಟನೆಯ ‘ವಿರಾಟ ಪರ್ವಂ 1922’ ಸಿನಿಮಾ ಟಾಲಿವುಡ್‌ನಲ್ಲಿ‌‌‌‌ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ, ಇದರ ಮುಕ್ಕಾಲು ಭಾಗದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ವೇಣು ಉಡುಗಾಲ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ‌ಕೊರೊನಾ ಭೀತಿಯಿಂದ ಸ್ಥಗಿತಗೊಂಡಿದೆ. ಲಾಕ್‌ಡೌನ್ ಅವಧಿ‌ ಪೂರ್ಣಗೊಂಡ‌ ಬಳಿಕ ಕೊನೆಯ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ‌ ನಿರ್ಧರಿಸಿದೆ.

ಸಾಯಿಪಲ್ಲವಿ ಈ ಸಿನಿಮಾದಲ್ಲಿ ನಕ್ಸಲೈಟ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ಹುತಾತ್ಮರ ಸ್ಮಾರಕದ ಮುಂದೆ ಕುಳಿತಿರುವ ಸಾಯಿಪಲ್ಲವಿ ಕೈಯಲ್ಲಿ‌‌ ಪೆನ್ನು‌ ಮತ್ತು ಪುಸ್ತಕ ಹಿಡಿದಿದ್ದಾರೆ. ದೀರ್ಘ ಆಲೋಚನೆಯಲ್ಲಿ‌ ಮುಳುಗಿರುವ ಆಕೆ ಸಾಮಾನ್ಯ ಹುಡುಗಿಯ ಉಡುಪು ಧರಿಸಿದ್ದಾರೆ. ಸುರೇಶ್ ಪ್ರೊಡಕ್ಷನ್ ಮತ್ತು ಶ್ರೀಲಕ್ಷ್ಮಿ ವೆಂಕಟೇಶ್ವರ‌ ಸಿನಿಮಾಸ್ ನಡಿ ಇದಕ್ಕೆ‌‌ ಬಂಡವಾಳ‌ ಹೂಡಲಾಗಿದೆ.

ಶೇಖರ್ ಕಮ್ಮುಲ ನಿರ್ದೇಶನದ ನಾಗಚೈತನ್ಯ ನಟನೆಯ ‘ಲವ್ ಸ್ಟೋರಿ’ ಚಿತ್ರಕ್ಕೂ ಅವರೇ ನಾಯಕಿ. ಕೊರೊನಾ ಲಾಕ್ ಡೌನ್ ಪರಿಣಾಮ ಇದರ ಶೂಟಿಂಗ್ ಕೂಡ ಸ್ಥಗಿತಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು