ಸೋಮವಾರ, ಜುಲೈ 4, 2022
21 °C

ಯುಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ ಹೃತಿಕ್–ಟೈಗರ್ ಜೋಡಿಯ ವಾರ್‌ ಟ್ರೇಲರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್‌ನಲ್ಲಿ ಈಗ ಟೈಗರ್ ಶ್ರಾಫ್‌ ಹಾಗೂ ಹೃತಿಕ್‌ ರೋಷನ್ ನಡುವೆ ಯುದ್ಧ ಶುರುವಾಗಿದೆ. ಇದರಲ್ಲಿ ಗೆಲ್ಲುವವರು ಯಾರು ಎಂಬುದನ್ನು ತಿಳಿಯಲು ‘ವಾರ್‘ ಸಿನಿಮಾವನ್ನು ನೋಡಲೇಬೇಕು!

‘ಯಶ್‌ ರಾಜ್‌ ಫಿಲ್ಮ್ಸ್‌’ ಬ್ಯಾನರ್ ಅಡಿಯಲ್ಲಿ ₹ 600 ಕೋಟಿ ವೆಚ್ಚದಲ್ಲಿ ‘ವಾರ್ ‘ ಸಿನಿಮಾ ನಿರ್ಮಾಣವಾಗುತ್ತಿದೆ. ಹೃತಿಕ್ ಹಾಗೂ ಟೈಗರ್ ಶ್ರಾಪ್‌ ನಟಿಸಿರುವ ಈ ಚಿತ್ರ ಬಾಲಿವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಹಾಕಿದೆ. 

ಕಳೆದ 4 ದಿನಗಳ ಈ ಹಿಂದೆ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು ಇಲ್ಲಿಯವರೆಗೂ 4.4 ಕೋಟಿ ಜನರು ವೀಕ್ಷಣೆ ಮಾಡಿದ್ದು ಹೊಸ ದಾಖಲೆಯಾಗಿದೆ. ಈ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ. 

ಟೈಗರ್ ಹಾಗೂ ಹೃತಿಕ್‌ ನಡುವಿನ ಹೊಡೆದಾಟ ಹಾಗೂ ಯುದ್ಧಭೂಮಿಯ ದೃಶ್ಯಗಳು ಮೈನವಿರೇಳಿಸುವಂತಿವೆ. ಈ ಟ್ರೇಲರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 

ಸಿದ್ದಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಶಾಲ್‌–ಶೇಖರ್ ಸಂಗೀತ ಸಂಯೋಜನೆ ಮಾಡಿದ್ದು, ಟೈಗರ್ ಹಾಗೂ ಹೃತಿಕ್ ಜೊತೆ ವಾಣಿ ಕಪೂರ್‌ ನಟಿಸಿದ್ದಾರೆ. ಅಕ್ಟೋಬರ್‌ 2ರಂದು ವಾರ್ ಸಿನಿಮಾ ಬಿಡುಗಡೆಯಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು