ಬೆಂಗಳೂರು: ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಅವರು ಮಗಳು ಇಂಡಿ ಜತೆಗೆ ‘ಪುಷ್ಟ’ ಸಿನಿಮಾದ ಡೈಲಾಗ್ ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

ಐಪಿಎಲ್ ಟೂರ್ನಿಯ ಮೂಲಕ ಭಾರತದೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿರುವ ವಾರ್ನರ್, ಐಪಿಎಲ್ನಲ್ಲಿ ಹೈದರಾಬಾದ್ ತಂಡದ ಪರ ಆಡಿದ್ದು, ಇಲ್ಲಿನ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ವಾರ್ನರ್, ಕನ್ನಡ, ತೆಲುಗು, ಹಿಂದಿ ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮಗಳು ‘ಇಂಡಿ’ ಜತೆ ‘ಪುಷ್ಪ ಅಂದ್ರೆ ಫ್ಲವರ್ ಅಲ್ಲ, ಫೈರ್’ ಎಂದು ಮಾಸ್ ಡೈಲಾಗ್ ಹೇಳುವ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಓದಿ... ‘ಅಮೃತವರ್ಷಿಣಿ’ ಚಿತ್ರಕ್ಕೆ 25 ವರ್ಷ: ನೆನಪು ಮೆಲುಕು ಹಾಕಿದ ನಟ ರಮೇಶ್ ಅರವಿಂದ್

ಈ ವಿಡಿಯೊ ಸಖತ್ ವೈರಲ್ ಆಗುತ್ತಿದ್ದು, ಇದುವರೆಗೆ 6.20 ಲಕ್ಷ ಮಂದಿ ವಿಡಿಯೊವನ್ನು ಇಷ್ಟಪಟ್ಟಿದ್ದಾರೆ.

ಇತ್ತೀಚಿಗೆ ವಾರ್ನರ್, ‘ಪುಷ್ಪ’ ಸಿನಿಮಾದ ‘ಶ್ರೀವಲ್ಲಿ..’ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ್ದ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ‘ಪುಷ್ಪ’ ಸಿನಿಮಾದ ‘ಶ್ರೀವಲ್ಲಿ..’ ಹಾಡು ಹೆಚ್ಚು ಖ್ಯಾತಿ ಗಳಿಸಿದೆ. ಅನೇಕರು ಅಲ್ಲು ಅರ್ಜುನ್ ಅವರು ಮಾಡಿದ ಡ್ಯಾನ್ಸ್ ಅನ್ನು ಅನುಕರಿಸಿ ರೀಲ್ಸ್ ಮಾಡುತ್ತಿದ್ದಾರೆ.

ಐಪಿಎಲ್ನಲ್ಲಿ 149 ಪಂದ್ಯಗಳಲ್ಲಿ ಆಡಿರುವ ವಾರ್ನರ್, 5,449 ರನ್ ಗಳಿಸಿದ್ದಾರೆ. ಸ್ಫೋಟಕ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ.

ಓದಿ...

ನಟ ಅಲ್ಲು ಅರ್ಜುನ್ಗೆ ಮಗಳು ಅರ್ಹಾ ಕೋರಿದ ‘ಪ್ರೀತಿಯ ಸ್ವಾಗತ’ ಹೀಗಿತ್ತು ನೋಡಿ..

ನಟಿ ದಿಶಾ ಮದನ್ ಬೇಬಿ ಬಂಪ್ ವಿಡಿಯೊ ವೈರಲ್: ಅಭಿಮಾನಿಗಳಿಂದ ಮೆಚ್ಚುಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.