ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಬಿಡುಗಡೆಯಾಗಲಿದೆ ‘ಅಮ್ಮನ ಮನೆ’

Last Updated 7 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಅಮ್ಮನ ಮನೆ
ರಾಘವೇಂದ್ರ ರಾಜ್‍ಕುಮಾರ್ ಅಭಿನಯಿಸಿರುವ, ‘ಅಮ್ಮನ ಮನೆ’ ಸಿನಿಮಾ ಶುಕ್ರವಾರ (ಮಾ. 8) ತೆರೆಕಾಣಲಿದೆ. 14 ವರ್ಷಗಳ ಅಂತರದ ಬಳಿಕ ರಾಘವೇಂದ್ರ ರಾಜ್‌ಕುಮಾರ್‌ ಅವರು ಈ ಚಿತ್ರದ ಮೂಲಕ ಪುನಃ ಪ್ರೇಕ್ಷಕರೆದುರು ಬರುತ್ತಿದ್ದಾರೆ.

‘ಅಮ್ಮನ ಮನೆ’ಗೆ ಬಿ. ಶಿವಾನಂದ್ ಅವರು ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. ಸಮೀರ್ ಕುಲಕರ್ಣಿ ಅವರ ಸಂಗೀತ ಹಾಗೂ ಪಿ.ವಿ.ಆರ್. ಸ್ವಾಮಿ ಅವರ ಛಾಯಾಗ್ರಹಣವಿದೆ. ಆತ್ಮಶ್ರೀ ಅವರು ಬಂಡವಾಳ ಹೂಡಿದ್ದಾರೆ.

ಸುಚೇಂದ್ರ ಪ್ರಸಾದ್, ರೋಹಿಣಿ, ಮಾನಸಿ, ಶೀತಲ್, ತಬಲ ನಾಣಿ, ನಿಖಿಲ್ ಮಂಜು, ಪ್ರಣಯಮೂರ್ತಿ, ಪ್ರವೀಣ್‌ ಭೂಷಣ್, ಸಂಗೀತಾ, ಸತೀಶ್, ಪಂಚಗೌರಿ, ಆರ್ಯನ್, ಮಾಲಾಶ್ರೀ, ಚಕ್ರವರ್ತಿ ಹಾಗೂ ಲಕ್ಷ್ಮಣ್‍ಗೌಡ ತಾರಾಗಣದಲ್ಲಿದ್ದಾರೆ.

***
ಒಂದ್ ಕಥೆ ಹೇಳ್ಲಾ?
ಐದು ಕಥೆಗಳ ಸಂಗಮವಿರುವ ಹಾರರ್ ಚಿತ್ರ ‘ಒಂದ್ ಕಥೆ ಹೇಳ್ಲಾ?’ ಈ ವಾರ ಬಿಡುಗಡೆಯಾಗುತ್ತಿದೆ. ಪೆಟಾಸ್ ಸಿನಿ ಕೆಫೆ ಲಾಂಛನದಡಿ 23 ಮಂದಿ ಬಂಡವಾಳ ಹೂಡಿ ಈ ಸಿನಿಮಾ ನಿರ್ಮಿಸಿದ್ದಾರೆ. ಒಂದು ಮುಖ್ಯವಾದ ಕಥೆಯ ಜೊತೆಗೆ ನಾಲ್ಕು ಉಪ ಕಥೆಗಳು ಸೇರುತ್ತವೆ. ಈ ಕಥೆಗಳ ಕೊಂಡಿಯು ಸಿನಿಮಾದ ಅಂತ್ಯದಲ್ಲಿ ವೀಕ್ಷಕರಿಗೆ ಲಭಿಸುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿಯ ತಾಂಡವ್ ರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಕ್ತಿ ಸೋಮಣ್ಣ, ಪ್ರತೀಕ್, ತಾರಾ, ಪ್ರಿಯಾಂಕಾ, ಪ್ರಣತಿ, ಕಾರ್ತಿಕ್ ರಾವ್, ರಮಾಕಾಂತ್ ಹಾಗೂ ಸೌಮ್ಯಾ ತಾರಾಗಣದಲ್ಲಿದ್ದಾರೆ.

ಈ ಚಿತ್ರವನ್ನು ಗಿರೀಶ್‌ ಜಿ. ಅವರು ನಿರ್ದೇಶಿಸಿದ್ದಾರೆ. ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ, ರೋಣದ ಬಕ್ಕೆಶ್ ಮತ್ತು ಕಾರ್ತಿಕ್ ಸಿ. ರಾವ್ ಅವರ ಸಂಗೀತ ಚಿತ್ರಕ್ಕಿದೆ.

***

‘ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’
ವೇಮುಗಂಟಿ ಅವರು ಕಥೆ– ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಜರ್ನಿ’ ಈ ವಾರ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಕೃಷ್ಣ ರಾಜ್ ಮತ್ತು ಕಿರಣ್ ಚೆತ್ವಾನಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

***
‘ಮದ್ವೆ’
ಹಿಂದು ಕೃಷ್ಣ ನಿರ್ದೇಶಿಸಿರುವ, ‘ಮದ್ವೆ’ ಸಿನಿಮಾ ಮಾರ್ಚ್‌ 8ರಂದು ತೆರೆಕಾಣುತ್ತಿದೆ. ಈ ಸಿನಿಮಾ ಈಗಾಗಲೇ ಹಲವು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ ಎಂಬುದು ಇದರ ಹೆಚ್ಚುಗಾರಿಕೆಯಾಗಿದೆ.

ಅಮರನಾಗ್ ಛಾಯಾಗ್ರಹಣ, ಪ್ರಶಾಂತ್ ಆರಾಧ್ಯ ಸಂಗೀತ, ವರುಣ್ ವಸಿಷ್ಠ ಸಂಕಲನ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ತಾರಾಗಣದಲ್ಲಿ ಪರಮೇಶ್, ಮಂಜುಮಾಧವ್‌, ಆರ್ಯ, ಆರೋಹಿ ಗೌಡ, ವೆಂಕಟೇಶ್, ನಾಗೇಶ್ ತಿಲಕ್, ಪ್ರಸಾದ್ ಗೌಡ, ಸಂಜು, ಮಂಡ್ಯ ಅನಿಲ್, ನಾಗವೇಣಿ, ಯಶೋದಾ ಮುಂತಾದವರಿದ್ದಾರೆ.

***
‘ಗೋಸಿ ಗ್ಯಾಂಗ್’
ಕೆ.ಶಿವಕುಮಾರ್ ಅವರು ಕಥೆ ಬರೆದು ನಿರ್ಮಿಸಿರುವ ‘ಗೋಸಿ ಗ್ಯಾಂಗ್’ ಚಿತ್ರವು ಈ ವಾರ ಬಿಡುಗಡೆಯಾಗುತ್ತಿದೆ. ರಾಜು ದೇವಸಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಹಾಲೇಶ್ ಅವರ ಛಾಯಾಗ್ರಹಣ, ಆರವ್ ರುಶಿಕ್ ಸಂಗೀತ ಇರುವ ಈ ಸಿನಿಮಾಗೆ ರಾಜು ದೇವಸಂದ್ರ ಅವರೇ ಸಂಭಾಷಣೆ ಬರೆದಿದ್ದಾರೆ. ನಟ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್, ಅಜಯ್ ಕಾರ್ತಿಕ್, ರೋಹಿತ್ ಅಭಯ್, ಅಪ್ಪು ವೆಂಕಟೇಶ್, ಮೋನಿಕಾ, ಅನುಷಾ, ಸೋನು ಪಾಟೀಲ್, ಎಸ್. ಉಮೇಶ್, ಕಿಲ್ಲರ್ ವೆಂಕಟೇಶ್, ಬಿರಾದಾರ, ಬ್ಯಾಂಕ್ ಜನಾರ್ದನ, ಮೈಕೆಲ್ ಮಧು, ಸುಚಿತ್ರಾ, ಕಾವ್ಯಾ ಪ್ರಕಾಶ್, ಅನ್ನಪೂರ್ಣಾ ಹಾಗೂ ಶಿವು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT