ಬುಧವಾರ, ಮೇ 18, 2022
26 °C

ಸನ್ನಿ ಲಿಯೋನ್ ಫೋನ್‌ನಲ್ಲಿ ಏನಿದೆ? ಇಂಟರ್‌ನೆಟ್‌ನಲ್ಲಿ ಜೋರಾಯ್ತು ಚರ್ಚೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Sunny Leone Instagram

ಬೆಂಗಳೂರು: ನಟಿ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ವಿವಿಧ ರೀತಿಯ ವಿಚಾರಗಳನ್ನು, ತಮಾಷೆಯ ಸನ್ನಿವೇಶಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಅಲ್ಲದೆ, ತಮ್ಮ ಸಿನಿಮಾದ ಪ್ರಚಾರ, ಇತರ ಜಾಹೀರಾತುಗಳ ಬಗ್ಗೆಯೂ ಸನ್ನಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಈ ಬಾರಿ ಸನ್ನಿ ಲಿಯೋನ್, ಸ್ಪ್ಲಿಟ್ಸ್‌ವಿಲಾ ಸಹಸ್ಪರ್ಧಿ ರಣ್‌ವಿಜಯ್ ಸಿಂಗ್ ಜತೆಗಿನ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೊದಲ್ಲಿ ಸನ್ನಿ ತನ್ನ ಮೊಬೈಲ್‌ನಲ್ಲಿ ಅದೇನನ್ನೋ  ರಣ್‌ವಿಜಯ್‌ಗೆ ತೋರಿಸುತ್ತಿದ್ದಾರೆ.

ಈ ಪೋಸ್ಟ್ ನೋಡಿರುವ ಸನ್ನಿ ಲಿಯೋನ್ ಅಭಿಮಾನಿಗಳು, ಸನ್ನಿ ಲಿಯೋನ್ ಫೋನ್‌ನಲ್ಲಿ ಏನಿರಬಹುದು ಮತ್ತು ರಣ್‌ವಿಜಯ್‌ಗೆ ಅದ್ಯಾವ ಫೋಟೊ ತೋರಿಸುತ್ತಿರಬಹುದು ಎಂದು ತಲೆಕೆರೆದುಕೊಂಡಿದ್ದಾರೆ.

ಸನ್ನಿ ಪೋಸ್ಟ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಮೀಮ್ ಪೇಜ್‌ಗಳಿಗೆ ಮತ್ತು ಟ್ರೋಲ್‌ಗಳಿಗೆ ಕೂಡ ಚರ್ಚೆಗೆ ಉತ್ತಮ ವಿಚಾರವಾಗಿ ಮಾರ್ಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು