ಬುಧವಾರ, ಅಕ್ಟೋಬರ್ 28, 2020
18 °C

‘ವಕೀಲ್‌ ಸಾಬ್’‌ನಲ್ಲಿ ಶೃತಿ ಹಾಸನ್ ನಟಿಸುತ್ತಿಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ ಪವರ್‌ಸ್ಟಾರ್ ಪವನ್ ಕಲ್ಯಾಣ್ ನಟನೆಯ 26ನೇ ಚಿತ್ರ ‘ವಕೀಲ್ ಸಾಬ್’‌. ಈ ಚಿತ್ರಕ್ಕೆ ಶೃತಿ ಹಾಸನ್ ನಾಯಕಿ ಎಂಬ ಸುದ್ದಿ ಈ ಹಿಂದೆ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಶೃತಿ ಪವನ್‌ ಜೊತೆ ತೆರೆ ಹಂಚಿಕೊಳ್ಳುವುದು ಅನುಮಾನವಾಗಿದೆ. 

ವಕೀಲ್ ಸಾಬ್ ಚಿತ್ರತಂಡದಿಂದ ಹೊರ ಬರುವ ಪ್ರತಿಯೊಂದು ಸಣ್ಣ ಸುದ್ದಿಯೂ ಪವನ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಭಿಮಾನಿಗಳು ಈ ಚಿತ್ರದ ಕುರಿತು ಹೊಸ ಸುದ್ದಿಯನ್ನು ಕೇಳಲು ಕಾಯುತ್ತಿರುತ್ತಾರೆ. ನಟಿ ಶೃತಿ ಹಾಸನ್ ಪವನ್‌ಗೆ ಜೋಡಿಯಾಗುವುದು ಪಕ್ಕಾ ಆಗಿತ್ತು. ಈ ಜೋಡಿ ಹಿಂದೆ ‘ಗಬ್ಬರ್ ಸಿಂಗ್’, ‘ಕಾಟಮರಾಯುಡು’ ಸಿನಿಮಾಗಳ ಮೂಲಕ ತೆರೆ ಮೇಲೆ ಕಮಾಲ್ ಮಾಡಿತ್ತು. ಅಭಿಮಾನಿಗಳಂತೂ ಈ ಜೋಡಿ ಮತ್ತೆ ತೆರೆ ಮೇಲೆ ಒಂದಾಗುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈಗ ಶೃತಿ ವಕೀಲ್ ಸಾಬ್‌ನಲ್ಲಿ ನಟಿಸುತ್ತಾರೋ ಇಲ್ಲವೋ ಎಂಬ ಅನುಮಾನ ಆರಂಭವಾಗಿದೆ. ಅದಕ್ಕೆ ಕಾರಣ ಆಂಗ್ಲ ಪತ್ರಿಕೆಯೊಂದಕ್ಕೆ ಆಕೆ ನೀಡಿದ ಸಂದರ್ಶನ. 

ಆ ಸಂದರ್ಶನದಲ್ಲಿ ಶೃತಿ ಬಾಲಿವುಡ್‌ ಹಾಗೂ ಇತರ ಭಾಷೆಯ ಸಿನಿಮಾ ಅವಕಾಶಗಳ ಬಗ್ಗೆ ಮಾತನಾಡಿದ್ದರು.  ಸಂದರ್ಶನದ ವೇಳೆ ಶೃತಿ ಪವರ್‌(ಬಾಲಿವುಡ್‌), ಕ್ರ್ಯಾಕ್‌ (ತೆಲುಗು), ಲಾಭಂ(ತಮಿಳು) ಚಿತ್ರಗಳಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದರು. ಈ ಸಿನಿಮಾಗಳ ಶೂಟಿಂಗ್ ಮುಗಿದ ಬಳಿಕವಷ್ಟೇ ಬೇರೆ ಸಿನಿಮಾಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ.

ಆ ಸಂದರ್ಶನದಲ್ಲಿ ‘ವಕೀಲ್ ಸಾಬ್’ ಚಿತ್ರದ ಕುರಿತು ಶೃತಿ ತುಟಿ ತೆರೆದಿಲ್ಲ. ಆ ಕಾರಣಕ್ಕೆ ಈ ಚಿತ್ರದಲ್ಲಿ ಶೃತಿ ನಟಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಗೊಂದಲ ಹುಟ್ಟುವಂತೆ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು