ಶುಕ್ರವಾರ, ಸೆಪ್ಟೆಂಬರ್ 25, 2020
22 °C

ನಟನೆಗೆ ಗುಡ್‌ಬೈ ಹೇಳಲಿದ್ದಾರಾ ಅನುಷ್ಕಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಟನೆಗೆ ಬಾಯ್ ಹೇಳಲಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. 2018ರ ‘ಜೀರೊ’ ಸಿನಿಮಾದಲ್ಲಿ ಇವರು ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಅಲ್ಲದೇ ಇತ್ತೀಚೆಗೆ ಸಿನಿಮಾ ಅವಕಾಶಗಳನ್ನೂ ತಿರಸ್ಕರಿಸುತ್ತಿದ್ದಾರಂತೆ. ಆ ಕಾರಣಕ್ಕೆ ನಟನೆಗೆ ಬಾಯ್ ಹೇಳುವ ಯೋಚನೆ ಮಾಡಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ. 

ಅನುಷ್ಕಾ ಶರ್ಮಾ ಕರೀನಾ, ಕತ್ರಿನಾರಂತೆ ಟಾಪ್ ಹೀರೊಯಿನ್‌ಗಳ ಪಟ್ಟಿಯಲ್ಲಿ ಇಲ್ಲದಿದ್ದರೂ ಉತ್ತಮ ನಟಿ ಎನ್ನಿಸಿಕೊಂಡಿದ್ದರು. 2008 ರಲ್ಲಿ ಬಿಡುಗಡೆಯಾಗಿದ್ದ ಶಾರುಕ್‌ ಖಾನ್ ನಟನೆಯ ‘ರಬ್ ನೇ ಬನಾ ದಿ ಜೋಡಿ’ ಸಿನಿಮಾದ ಮೂಲಕ ಇವರು ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದರು. ನಂತರ ’ಬ್ಯಾಂಡ್ ಬಜಾ ಬಾರಾತ್ ‌’, ‘ಜಬ್ ತಕ್ ಹೇ ಜಾನ್’‌, ‘ಪಿಕೆ’, ‘ಸುಲ್ತಾನ್’, ‘ಯೇ ದಿಲ್ ಹೇ ಮುಷ್ಕಿಲ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಈ ಬೆಡಗಿ. ಅಲ್ಲದೇ ಬಾಲಿವುಡ್‌ನ ರಣವೀರ್‌, ರಣಬೀರ್‌, ಶಾಹಿದ್ ಸೇರಿದಂತೆ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಬಾಲಿವುಡ್ ಖಾನ್ ತ್ರಯರೊಂದಿಗೆ ಹಿಟ್ ಸಿನಿಮಾ ನೀಡಿದ ನಾಯಕಿಯರ ಪಟ್ಟಿಯಲ್ಲಿ ಇವರ ಹೆಸರೂ ಇದೆ.

ಸಿನಿಮಾಗಳಲ್ಲಿ ನಟಿಸುತ್ತಿದ್ದ ಅನುಷ್ಕಾ ಇದ್ದಕ್ಕಿದ್ದಂತೆ ಸಿನಿಮಾ ನಿರ್ಮಾಣದತ್ತ ಮುಖ ಮಾಡುತ್ತಾರೆ. ’ಎನ್ಎಚ್‌10’, ‘ಫಿಲ್ಲೌರಿ’, ‘ಪರಿ’ ಸಿನಿಮಾಗಳನ್ನು ನಿರ್ಮಾಣ ಮಾಡುವ ಜೊತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಕ್ರಿಕೆಟರ್ ವಿರಾಟ್ ಕೊಹ್ಲಿ ಜೊತೆ ಅನೇಕ ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಅನುಷ್ಕಾ 2017ರ ಡಿಸೆಂಬರ್‌ನಲ್ಲಿ ಅವರ ಜೊತೆ ಸಪ್ತಪದಿ ತುಳಿದಿದ್ದರು. 2018ರಲ್ಲಿ ಶಾರುಖ್ ಖಾನ್ ಜೊತೆ ನಟಿಸಿದ್ದ ‘ಜೀರೊ’ ಆಕೆ ನಟಿಸಿದ್ದ ಕೊನೆಯ ಚಿತ್ರ. ಅದಾದ ಬಳಿಕ ಸಿನಿಮಾ ಹಾಗೂ ವೆಬ್‌ ಸಿರೀಸ್‌ಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ ಅನುಷ್ಕಾ.

ಆ ಕಾರಣಕ್ಕೆ ಅನುಷ್ಕಾ ನಟನೆಗೆ ಬ್ರೇಕ್ ಹಾಕಿ ಸಿನಿಮಾ ನಿರ್ಮಾಪಕಿಯಾಗಿಯೇ ಮುಂದುವರಿಯಲಿದ್ದಾರಾ ಎಂಬ ಚರ್ಚೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಸುದ್ದಿ ಮಾಡುತ್ತಿದೆ. ನಿರ್ಮಾಪಕರಾಗಿ ಮುಂದುವರಿಯುವ ಗುರಿ ಇರಿಸಿಕೊಂಡಿರುವ ಅನುಷ್ಕಾ ತಮಗೆ ಬಂದ ಸಿನಿಮಾ ಆಫರ್‌ಗಳನ್ನು ತಿರಸ್ಕರಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು