ಭಾನುವಾರ, ಮೇ 29, 2022
23 °C

‘ಧೂಮ್‌ 4’ನಲ್ಲಿ ಖಳನಾಯಕಿಯಾಗಿ ನಟಿಸಲಿದ್ದಾರಾ ದೀಪಿಕಾ ಪಡುಕೋಣೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನ ಧೂಮ್‌ ಸರಣಿಯ ನಿರ್ಮಾಪಕರು ಈಗ ನಾಲ್ಕನೇ ಆವೃತ್ತಿಯನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಧೂಮ್‌ 4 ಚಿತ್ರದಲ್ಲಿ ದೀಪಿಕಾ ಪಡುಕೋಣೆ ಖಳನಾಯಕಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಬಾಲಿವುಡ್‌ ಅಂಗಳದಿಂದ ಕೇಳಿಬರುತ್ತಿದೆ.

ಮೂಲಗಳ ಪ್ರಕಾರ ಧೂಮ್‌ 4 ತಂಡ ದೀಪಿಕಾ ಅವರನ್ನು ಖಳನಾಯಕಿಯಾಗಿ ನಟಿಸಲು ಕೇಳಿಕೊಂಡಿದೆಯಂತೆ. ಸದಾ ಚಾಲೆಜಿಂಗ್‌ ಪಾತ್ರಗಳನ್ನು ಇಷ್ಟಪಡುವ ದೀಪಿಕಾ ಕೂಡ ಈ ಪಾತ್ರದ ಬಗ್ಗೆ ಉತ್ಸುಕರಾಗಿದ್ದಾರಂತೆ. ಎಲ್ಲವೂ ಸರಿಯಾಗಿ ನಡೆದರೆ ದೀಪಿಕಾ ಧೂಮ್ ತಂಡ ಸೇರುವ ಸಾಧ್ಯತೆ ಇದೆ.

ಧೂಮ್ ಸರಣಿಗಳು ವಿಭಿನ್ನ ಚೇಸ್‌ ದೃಶ್ಯಗಳ ಮೂಲಕ ಖ್ಯಾತಿ ಪಡೆದಿದ್ದವು. ಮೊದಲ ಸರಣಿಯಲ್ಲಿ ಅಭಿಷೇಕ್ ಬಚ್ಚನ್‌, ಉದಯ್‌ ಚೋಪ್ರಾ ಹಾಗೂ ಜಾನ್ ಅಬ್ರಾಹಂ, ಎರಡನೇ ಸರಣಿಯಲ್ಲಿ ಹೃತಿಕ್ ರೋಷನ್‌ ಹಾಗೂ ಮೂರನೇ ಸರಣಿಯಲ್ಲಿ ಅಮೀರ್ ಖಾನ್ ನಟಿಸಿದ್ದರು. ಈಗ ನಾಲ್ಕನೇ ಸರಣಿಗೆ ಖಳನಾಯಕಿಯನ್ನು ಆಯ್ಕೆ ಮಾಡಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ದೀಪಿಕಾ ಕೈಯಲ್ಲೀಗ ಸಾಲು ಸಾಲು ಚಿತ್ರಗಳಿವೆ. ಶಾರುಕ್ ಖಾನ್‌ ಹಾಗೂ ಜಾನ್ ಅಬ್ರಾಹಂ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರವೊಂದರಲ್ಲಿ ಈಕೆ ನಟಿಸುತ್ತಿದ್ದಾರೆ. ಇದರೊಂದಿಗೆ ಶಕುನ್ ಬಾತ್ರ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ಅನನ್ಯಾ ಪಾಂಡೆ ಹಾಗೂ ಸಿದ್ಧಾರ್ಥ್ ಚರ್ತುವೇದಿ ನಟನೆಯ ಚಿತ್ರದಲ್ಲೂ ಮುಖ್ಯಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಕಬೀರ್‌ ಖಾನ್ ಅವರ 83 ಸಿನಿಮಾದಲ್ಲೂ ದೀಪಿಕಾ ನಟಿಸುತ್ತಿದ್ದು ಪತಿ ರಣವೀರ್‌ ಸಿಂಗ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಸಹ ನಿರ್ಮಾಪಕಿ ಕೂಡ ಹೌದು.

ತೆಲುಗಿನ ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನ ಸಿನಿಮಾದಲ್ಲಿ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ ದೀಪಿಕಾ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಸಿನಿಮಾದಲ್ಲಿ ಮೊದಲ ಬಾರಿಗೆ ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮಹಾಭಾರತ್ ಸಿನಿಮಾದಲ್ಲೂ ದ್ರೌಪದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಡಿಪ್ಪಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು