ಗುರುವಾರ , ಮೇ 26, 2022
22 °C

‘ಆದಿಪುರುಷ್‌’ನಲ್ಲಿ ಪ್ರಭಾಸ್‌ಗೆ ತಾಯಿಯಾಗಲಿದ್ದಾರಾ ಕನಸಿನ ರಾಣಿ ಹೇಮಮಾಲಿನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಆದಿಪುರುಷ್‌’. ಪ್ಯಾನ್‌ ಇಂಡಿಯಾ ಸಿನಿಮಾವಾಗಿರುವ ಆದಿಪುರುಷ್‌ ಹಿಂದೂ ಮಹಾಕಾವ್ಯ ರಾಮಾಯಣ ಆಧರಿತವಾಗಿದೆ. ಈ ಸಿನಿಮಾಕ್ಕೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಓಂ ರಾವತ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ ಸೈಫ್ ಅಲಿ ಖಾನ್ ಲಂಕೇಶನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸೈಫ್ ಅವರದ್ದು ಖಳನಾಯಕನ ಪಾತ್ರ.

ಟಿ–ಸಿರೀಸ್ ಸಂಸ್ಥೆ ನಿರ್ಮಾಣದ ಈ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಅನೇಕ ಹಾಲಿವುಡ್‌ ತಂತ್ರಜ್ಞರು ಇದರಲ್ಲಿ ಕೆಲಸ ಮಾಡಲಿದ್ದಾರೆ. ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ ನಾಯಕನ ತಾಯಿಯ ಪಾತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟಿಯೊಬ್ಬರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಬಾಲಿವುಡ್‌ನ ಕನಸಿನ ರಾಣಿ ಎಂದೇ ಖ್ಯಾತರಾಗಿರುವ ನಟಿ ಹೇಮಮಾಲಿನಿ ಆದಿಪುರುಷ್‌ನಲ್ಲಿ ಪ್ರಭಾಸ್‌ಗೆ ತಾಯಿಯಾಗಲಿದ್ದಾರಂತೆ. ಚಿತ್ರದಲ್ಲಿ ಕೌಸಲ್ಯ ಪಾತ್ರಕ್ಕೆ ಹೇಮಮಾಲಿನಿ ಬಣ್ಣ ಹಚ್ಚಲಿದ್ದಾರೆ ಎಂಬ ಗಾಳಿಸುದ್ದಿಯೊಂದು ಹರಿದಾಡುತ್ತಿದೆ. ಚಿತ್ರ ನಿರ್ಮಾಣ ತಂಡ ಈ ಬಗ್ಗೆ ಈಗಾಗಲೇ ಹೇಮಾ ಅವರೊಂದಿಗೆ ಮಾತುಕತೆ ನಡೆಸಿದೆಯಂತೆ. ಈ ವಿಷಯ ನಿಜವೇ ಆದರೆ ಸಿನಿಪ್ರೇಮಿಗಳಿಗೆ ಖುಷಿ ಹೆಚ್ಚುವುದರಲ್ಲಿ ಸಂಶಯವಿಲ್ಲ. ಈ ಹಿಂದೆ ತೆಲುಗಿನ ‘ಗೌತಮಿ ಪುತ್ರ ಸಾತರ್ಕಣಿ’ ಸಿನಿಮಾದಲ್ಲಿ ನಟ ಬಾಲಕೃಷ್ಣ ಅವರಿಗೆ ತಾಯಿಯಾಗಿ ನಟಿಸಿದ್ದರು ಹೇಮಮಾಲಿನಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು