ಸೋಮವಾರ, ಮೇ 23, 2022
21 °C

ಪ್ರಭಾಸ್‌ಗೆ ವಿಲನ್ ಆಗಲಿದ್ದಾರಾ ಸೈಫ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಮುಂದಿನ ‘ಆದಿ ಪುರುಷ್’ ಸಿನಿಮಾದಲ್ಲಿ ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಭಾಸ್ ನಟನೆಯ 21ನೇ ಸಿನಿಮಾದ ಬಗ್ಗೆ ಒಂದರ ಹಿಂದೆ ಒಂದರಂತೆ ಕುತೂಹಲಕಾರಿ ಅಂಶಗಳು ಹೊರಬೀಳುತ್ತಿವೆ. ಈಗ ಸದ್ಯ ಸುದ್ದಿಯ ಪ್ರಕಾರ ಸೈಫ್ ಪ್ರಭಾಸ್‌ಗೆ ಖಳನಾಯಕನಾಗಲಿದ್ದಾರಂತೆ. 

ಇತ್ತೀಚೆಗೆ ಟಿ–ಸಿರೀಸ್ ಸಂಸ್ಥೆಯು ಆದಿಪುರುಷ್ ಸಿನಿಮಾವು ₹500 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದೆ ಎಂಬ ಮಾಹಿತಿಯನ್ನು ಹೊರ ಹಾಕಿದೆ. ಜಾಗತಿಕ ಮಟ್ಟದಲ್ಲಿ ಯಶಸ್ಸು ಗಳಿಸುವ ಗುರಿಯನ್ನು ಇರಿಸಿಕೊಂಡಿದೆ ಸಂಸ್ಥೆ.

ಸಿನಿಮಾ ಘೋಷಣೆಯಾದ ದಿನದಿಂದಲೂ ಖಳನಾಯಕ ಯಾರು ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡುತ್ತಿತ್ತು. ಸದ್ಯ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಅಲ್ಲದೇ ಸೈಫ್ ಅಲಿ ಖಾನ್ ಸಿನಿಮಾಕ್ಕೆ ಖಳನಾಯಕ ಎನ್ನುವುದು ಫಿಕ್ಸ್ ಆಗಿದೆಯಂತೆ. ಈ ಹಿಂದೆ ಸೈಫ್ ತಾನಾಜಿ ಸಿನಿಮಾದಲ್ಲೂ ಖಳನಾಯಕನಾಗಿ ನಟಿಸಿದ್ದರು. ಆದಿಪುರುಷ್ ಸಿನಿಮಾದ ನಿರ್ದೇಶಕ ಓಂ ರಾವತ್ ಖಳನಾಯಕನ ಪಾತ್ರಕ್ಕೆ ಸೈಫ್ ಅವರ ಹೆಸರನ್ನೇ ಸೂಚಿಸಿದ್ದಾರಂತೆ. ಅಲ್ಲದೇ ಸೈಫ್ ಕೂಡ ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಬಾಹುಬಲಿ ನಂತರ ಪ್ರಭಾಸ್ ಉತ್ತರ ಭಾರತದಲ್ಲಿ ಅಭಿಮಾನಿಗಳ ಬಳಗವನ್ನೇ ಹುಟ್ಟುಹಾಕಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು