ಬಾಜಿಗರ್ ಚಿತ್ರದಿಂದ ಡಿಡಿಎಲ್‌ಜೆ ಸಿನಿಮಾದವರೆಗೂ ಶಾರುಕ್ ಖಾನ್ ಮತ್ತು ಕಾಜೊಲ್ ಜೋಡಿ ಮಾಡಿದ ಮೋಡಿಯನ್ನು ಸಿನಿಪ್ರಿಯರು ಮನಸಾರೆ ಮೆಚ್ಚಿದ್ದರು. ಈ ಜೋಡಿಯ ಸಿನಿಮಾಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ!

ಈ ಜೋಡಿಯ ಸಿನಿಮಾ ಎಂದರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಇದೇ ಜೋಡಿ ನಿಜ ಜೀವನದ ಜೋಡಿಯಾಗಿದ್ದರೆ! ಇದೇನಪ್ಪ ಈಗ ಈ ಪ್ರಶ್ನೆ ಎಂದು ಅಚ್ಚರಿ ಪಡುತ್ತಿದ್ದೀರಾ?

ಇನ್‌ಸ್ಟಾಗ್ರಾಂನಲ್ಲಿ ಕಾಜೊಲ್ ಹಾಕಿದ್ದ 'ಏನಾದರೂ ಪ್ರಶ್ನೆ ಕೇಳಿ' ಸ್ಟೇಟಸ್‌ಗೆ ಅಭಿಮಾನಿಯೊಬ್ಬರು ‘ಒಂದು ವೇಳೆ ನಿಮಗೆ ಅಜಯ್ ದೇವಗನ್ ಸಿಗದಿದ್ದರೆ, ಶಾರುಕ್ ಖಾನ್ ಅವರನ್ನು ಮದುವೆಯಾಗುತ್ತಿದ್ರಾ’ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಜೊತೆಗೆ ಎಲ್ಲಾ ಪ್ರಶ್ನೆಗಳಿಗೂ ನೀವು ಉತ್ತರಿಸುತ್ತೀರಿ ಎಂದಿದ್ದೀರಾ ಎಂಬ ಸಾಲನ್ನು ಸೇರಿಸಿ, ಉತ್ತರಿಸಲೇಬೇಕು ಎನ್ನುವಂತೆ ನಮ್ರತೆಯಿಂದ ಒತ್ತಾಯಿಸಿದ್ದಾರೆ ಕೂಡ.

ಪ್ರಶ್ನೆಯೇ ಹೀಗಿದ್ದರೆ, ಅದಕ್ಕೆ ಕಾಜೊಲ್ ನೀಡಿದ ಉತ್ತರ ಇನ್ನೂ ಭರ್ಜರಿಯಾಗಿತ್ತು. ‘ಅವರಲ್ಲವೇ ಪ್ರೇಮ ನಿವೇದನೆ ಮಾಡಬೇಕಾಗಿದ್ದದ್ದು?’ ಎಂದು ಹೇಳಿ ಪ್ರಶ್ನೆ ಕೇಳಿದವರೇ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.

ಇದರ ಜೊತೆಗೆ, ಶಾರುಕ್ ಜೊತೆಗಿನ ಮುಂದಿನ ಸಿನಿಮಾ ಯಾವುದು?ಸಹ ನಟರಾಗಿ ಶಾರುಕ್ ಅಥವಾ ಅಜಯ್? ನಿಮ್ಮ ಬೆಸ್ಟ್ ಫ್ರೆಂಡ್ ಶಾರುಕ್ ಬಗ್ಗೆ ಒಂದು ಪದದಲ್ಲಿ ವಿವರಿಸಿ? ನಿಮ್ಮ ಮತ್ತು ಶಾರುಕ್ ನಡುವಿನ ಬಾಂಧವ್ಯವನ್ನು ಒಂದು ವಾಕ್ಯದಲ್ಲಿ ಹೇಳಿ?... ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದಾರೆ.

ಇದನ್ನೂ ಓದಿ:ಅಜಯ್– ಕಾಜೊಲ್ ಸಂಸಾರದ ಗುಟ್ಟು

ನಿಮ್ಮ ಮೊದಲ ಕ್ರಶ್ ಯಾರು ಎಂಬ ಪ್ರಶ್ನೆಗೆ ಕಾಜೊಲ್, ‘ನಾನು ನನ್ನ ಮೊದಲ ಕ್ರಶ್ ಅನ್ನೇ ಮದುವೆಯಾಗಿದ್ದೇನೆ’ ಎಂದು ಉತ್ತರಿಸಿದ್ದಾರೆ. ಹೀಗೆ ಭಿನ್ನ ಭಿನ್ನ ಪ್ರಶ್ನೆಗಳೆಲ್ಲದಕ್ಕೂ ಕಾಜೊಲ್ ಮುದ್ದು ಮುದ್ದಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.