‘ರಾಮಾ ರಾಮಾ ರೇ’ ಖ್ಯಾತಿಯ ಡಿ.ಸತ್ಯಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ‘X&Y’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

‘ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಮುಗಿದು ಡಿಟಿಎಸ್ ಕೆಲಸ ನಡೆಯುತ್ತಿದೆ. ಫ್ಯಾಂಟಸಿ, ಸೋಷಿಯಲ್ ಡ್ರಾಮಾ ಹೊಂದಿರುವ ಕಥೆಯೇ ಈ ಚಿತ್ರದ ವಿಶೇಷತೆ. ಇಲ್ಲಿವರೆಗೆ ಪುನರ್ಜನ್ಮ, ಸತ್ತ ಮೇಲೆ ದೆವ್ವವಾಗುವ ಕಥೆಗಳನ್ನು ನೋಡಿದ್ದೇವೆ. ಆದರೆ ಹುಟ್ಟೇ ಇಲ್ಲದ ಆತ್ಮದ ಕುರಿತಾಗಿ ಫ್ಯಾಂಟಸಿ ಕಥೆಯನ್ನು ನೋಡಿಲ್ಲ. ಅಂಥ ಕಥೆ ಈ ಚಿತ್ರದಲ್ಲಿದೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರವನ್ನು ನೀಡಿದೆ. ಜೂನ್ ತಿಂಗಳಲೇ ಚಿತ್ರ ಬಿಡುಗಡೆ ಆಲೋಚನೆಯಿದೆ’ ಎಂದರು ಸತ್ಯಪ್ರಕಾಶ್.

‘ಮ್ಯಾನ್ ಆಫ್ ದ ಮ್ಯಾಚ್’ ಚಿತ್ರದ ನಟ ಅಥರ್ವ ಪ್ರಕಾಶ್, ‘ದೂರದರ್ಶನ’ ಸಿನಿಮಾ ನಾಯಕಿ ಅಯನಾ ಹಾಗೂ ಬೃಂದಾ ಆಚಾರ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ದೊಡ್ಡಣ್ಣ, ವೀಣಾ ಸುಂದರ್, ಸುಂದರ್ ಮೊದಲಾದವರು ತಾರಾಗಣದಲ್ಲಿದ್ದಾರೆ.

ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಸತ್ಯ ಪಿಕ್ಚರ್ಸ್ ಬ್ಯಾನರ್ ನಿರ್ಮಾಣದ ಈ ಚಿತ್ರಕ್ಕೆ ಲವಿತ್ ಛಾಯಾಚಿತ್ರಗ್ರಹಣ, ಕೌಶಿಕ್ ಹರ್ಷ ಸಂಗೀತ, ಬಿ.ಎಸ್.ಕೆಂಪರಾಜು ಸಂಕಲನವಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು ರಾಜೇಶ್ ಕೃಷ್ಣನ್, ಹೇಮಂತ್ ಮೊದಲಾದವರು ಹಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.