‘ಕೆಜಿಎಫ್’ ಚಿತ್ರದಲ್ಲಿ ಎದುರಾಳಿಗಳ ಮೂಳೆಗಳನ್ನು ಪುಡಿಗುಟ್ಟಿದವರು ‘ರಾಕಿಂಗ್ ಸ್ಟಾರ್’ ಯಶ್. ಖಡಕ್ ಡೈಲಾಗ್ ಮೂಲಕ ಅಬ್ಬರಿಸಿದ್ದು ಉಂಟು. ತೆರೆಯ ಮೇಲೆ ಕಾಣಿಸುವಷ್ಟೇ ಅವರದು ಗಂಭೀರವಾದ ವ್ಯಕ್ತಿತ್ವ. ಮಗಳೊಂದಿಗೆ ಕಳೆದ ಅಪರೂಪದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಯಶ್ ಅವರು ಪುತ್ರಿ ಐರಾ ಮುಂದೆ ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆ.

ಮಗುವಿಗೆ 6, 7, 8, 11ನೇ ತಿಂಗಳಿನಲ್ಲಿ ಅಥವಾ 3, 5ನೇ ವರ್ಷದಲ್ಲಿ ಕಿವಿ ಚುಚ್ಚುವ ಕಾರ್ಯ ಮಾಡಲಾಗುತ್ತದೆ. ರಾಕಿಂಗ್ ಸ್ಟಾರ್ ಅವರು ತನ್ನ ಮುದ್ದು ಕಂದನ ಕಿವಿ ಚುಚ್ಚಿಸಿದ್ದಾರೆ. ಇದನ್ನು ಅವರ ಪತ್ನಿ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಐರಾಳ ಕಿವಿಗಳನ್ನು ಚುಚ್ಚಿಸಿದ್ದೇವೆ. ಪೋಷಕರಾದ ನಮ್ಮ ಜವಾಬ್ದಾರಿ ಅದು. ಆದರೆ, ಅವಳು ಅಳುವುದನ್ನು ನಾವು ನೋಡಲಾಗಲಿಲ್ಲ. ನಮ್ಮ ಹೃದಯವೇ ಮುರಿದಂತಾಯಿತು. ನಾನು ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಕಣ್ಣಲ್ಲಿ ಕಣ್ಣೀರನ್ನು ನೋಡಿದೆ. ಅಭಿಮಾನಿಗಳೇ ಚಿಂತಿಸಬೇಡಿ. ಅಪ್ಪ ಮತ್ತು ಮಗಳು ಇಬ್ಬರೂ ಚೆನ್ನಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.