ನಟ ಯಶ್ ನಟನೆಯ 19ನೇ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಚಿತ್ರದ ‘ತಬಾಹಿ’ ಎನ್ನುವ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

‘ತಬಾಹಿ’ ಎನ್ನುವ ಹಾಡು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ‘ಎಲ್ಲಾ ಮಿತಿಮೀರಿ ಹೋಗೋಣ ಬಾ..ಎಲ್ಲಾ ಗಡಿ ದಾಟಿ ನೋಡೋಣ ಬಾ...’ ಎಂಬ ಕನ್ನಡ ಹಾಡಿಗೆ ನಿರ್ದೇಶಕ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಹಿಂದಿಯಲ್ಲಿ ರಾಜ್ ಶೇಖರ್, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ವಿಘ್ನೇಶ್ ಶಿವನ್ ಹಾಗೂ ಮಲಯಾಳದಲ್ಲಿ ರಫೀಕ್ ಅಹಮ್ಮದ್ ಸಾಹಿತ್ಯ ಬರೆದಿದ್ದಾರೆ. ಎಲ್ಲಾ ಭಾಷೆಗಳಲ್ಲಿ ವಿಶಾಲ್ ಮಿಶ್ರಾ ಸಂಗೀತ ಸಂಯೋಜಿಸಿ ಹಾಡಿದ್ದಾರೆ.

ಸೂರ್ಯಾಸ್ತದ ಸಂದರ್ಭದಲ್ಲಿ ಸಮುದ್ರ ಕಿನಾರೆಯಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಕುಳಿತಿರುವ ಪೋಸ್ಟರ್ ಹಿನ್ನೆಲೆಯಲ್ಲಿ ಹಾಡು ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ವಿಡಿಯೊ ಇಲ್ಲದ ಹಾಡಿನಿಂದ ನಿರಾಶೆಯಾಗಿದೆ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ಚಿತ್ರತಂಡ ಉದ್ದೇಶಪೂರ್ವಕವಾಗಿಯೇ ವಿಡಿಯೊ ಬಿಡುಗಡೆ ಮಾಡಿಲ್ಲ. ಕಿಯಾರಾ ಅವರ ಎರಡು ಪೋಸ್ಟರ್ಗಳನ್ನು ಸೂಕ್ಷ್ಮವಾಗಿ ಗಮಸಿದರೆ ಇದು ತಿಳಿಯುತ್ತದೆ. ವಿಡಿಯೊ ಬಿಡುಗಡೆ ಮಾಡದೆ ಕಿಯಾರಾ ಅಡ್ವಾಣಿ ಅವರ ಪಾತ್ರದ ಗುಣಲಕ್ಷಣಗಳನ್ನು ಗುಟ್ಟಾಗಿ ಇರಿಸಲಾಗಿದೆ ಎನ್ನಲಾಗಿದೆ.

8ಕ್ಕೆ ಟ್ರೇಲರ್: ಈಗಾಗಲೇ ಟೀಸರ್ ಹಾಗೂ ಪಾತ್ರಗಳ ಪೋಸ್ಟರ್ ಮೂಲಕ ಸದ್ದು ಮಾಡಿರುವ ‘ಟಾಕ್ಸಿಕ್’ ಚಿತ್ರದ ಟ್ರೇಲರ್ ಇದೇ 8ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಯಶ್ ಸೇರಿದಂತೆ ಇಡೀ ತಾರಾಬಳಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.

ಸಿನಿಮಾದಲ್ಲಿ ಯಶ್ ಜೊತೆಗೆ ನಯನತಾರಾ, ಹುಮಾ ಖುರೇಶಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ನಟಿಸಿದ್ದಾರೆ. ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ನಲ್ಲಿ ನಟರಾಗಿ, ಸಹ–ಬರಹಗಾರರಾಗಿ, ಸಹ–ನಿರ್ಮಾಪಕರಾಗಿ ಯಶ್ ಕಾರ್ಯನಿರ್ವಹಿಸಿದ್ದಾರೆ. ವೆಂಕಟ್ ಕೆ.ನಾರಾಯಣ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಮಾನ್ಸ್ಟರ್ಮೈಂಡ್ ಕ್ರಿಯೇಷನ್ಸ್ನಡಿ ಯಶ್ ಸಾಥ್ ನೀಡಿದ್ದಾರೆ. ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದ್ದು, ಹಿಂದಿ, ತಮಿಳು, ತೆಲುಗು, ಮಲಯಾಳ ಸೇರಿದಂತೆ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.