ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾತ್ರ ಟೀಸರ್‌: ರಾಜಶೇಖರ್ ರೆಡ್ಡಿ ಪಾತ್ರದಲ್ಲಿ ಮಮ್ಮುಟ್ಟಿ ಮಿಂಚು

Last Updated 8 ಜುಲೈ 2018, 11:47 IST
ಅಕ್ಷರ ಗಾತ್ರ

ಬೆಂಗಳೂರು:ಆಂಧ್ರಪ್ರದೇಶದ ದಿವಂಗತ ಮಾಜಿ ಮುಖ್ಯಮಂತ್ರಿ ವೈ. ಎಸ್‌. ರಾಜಶೇಖರ ರೆಡ್ಡಿ ಅವರ ಪಾದಯಾತ್ರೆ ಆಧರಿಸಿದ ‘ಯಾತ್ರ‘ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಮೊದಲ ದಿನವೇ 6.9 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

ಟಾಲಿವುಡ್‌ನಲ್ಲಿ ಈ ಟೀಸರ್‌ ಹೊಸ ಸಂಚಲನ ಉಂಟು ಮಾಡಿದೆ.

ಮಲಯಾಳಂನ ಮೆಗಾ ಸ್ಟಾರ್‌ ಮಮ್ಮುಟ್ಟಿ ವೈ ಎಸ್‌ ರಾಜಶೇಖರ ರೆಡ್ಡಿ ಪಾತ್ರವನ್ನು ನಿರ್ವಹಿಸಿದ್ದಾರೆ. ಟೀಸರ್‌ನಲ್ಲಿ ಯಾತ್ರೆಗೆ ಸಜ್ಜಾಗಿ ಹೊರಡುವ ದೃಶ್ಯವಿದೆ. ಇದರಲ್ಲಿ ಮಮ್ಮುಟ್ಟಿ ಸಖತ್ ಖಡಕ್‌ ಆಗಿ ಮಿಂಚಿದ್ದಾರೆ. ಮಾಹಿ ರಾಘವ್‌ ಯಾತ್ರ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

2004ರಲ್ಲಿ ರಾಜಶೇಖರ ರೆಡ್ಡಿ 1475 ಕಿಲೋಮೀಟರ್‌ ಪಾದಯಾತ್ರೆ ಮಾಡಿ ಜನರನ್ನು ಭೇಟಿ ಮಾಡಿದ್ದರು. ಇದರ ಪರಿಣಾಮವಾಗಿ ಅವರು ಜಯಗಳಿಸಿದ್ದರು. ಈ ಕಥೆಯನ್ನು ಇಟ್ಟುಕೊಂಡು ಯಾತ್ರ ಸಿನಿಮಾ ತಯಾರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT