ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೆಂಡಿಂಗ್‌ನಲ್ಲಿ ಯುವರತ್ನ –ಜೇಮ್ಸ್‌

Last Updated 18 ಮಾರ್ಚ್ 2020, 10:24 IST
ಅಕ್ಷರ ಗಾತ್ರ

ನಟ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಮತ್ತು ‘ಜೇಮ್ಸ್‌’ ಚಿತ್ರಗಳ ಟೀಸರ್‌ ಹಾಗೂ ಪೋಸ್ಟರ್‌ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ. ಪುನೀತ್‌ ಅವರ ಹುಟ್ಟುಹಬ್ಬದ ಕೊಡುಗೆಯಾಗಿ ಇವುಗಳನ್ನು ಬಿಡುಗಡೆ ಮಾಡಲಾಗಿತ್ತು. ಯೂಟ್ಯೂಬ್‌ ಚಾನೆಲ್‌ನಲ್ಲಿ ‘ಯುವರತ್ನ’ದ ಡೈಲಾಗ್‌ ಟೀಸರ್‌ ಮತ್ತು ‘ಜೇಮ್ಸ್‌’ ಮೋಷನ್‌ ಪೋಸ್ಟರ್‌ ಟ್ರೆಂಡಿಂಗ್‌ನಲ್ಲಿವೆ.

ಸಂತೋಷ್‌ ಆನಂದ್‌ರಾಮ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಯುವರತ್ನ’ದ ಡೈಲಾಗ್‌ ಟೀಸರ್‌ ಪುನೀತ್‌ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತ ಬಿಡುಗಡೆಯಾಗಿತ್ತು. ಎರಡು ದಿನಗಳಲ್ಲಿ ಈ ಟೀಸರ್‌ ಅನ್ನು ಸುಮಾರು 20 ಲಕ್ಷ ಜನರು ವೀಕ್ಷಿಸಿದ್ದಾರೆ.

‘ಗಂಡಸ್ತನ, ಚರ್ಬಿ, ಮೀಟರ್‌ ಇದೆಲ್ಲ ಇರುವನು ಒಬ್ಬ ಬೇಕು’, ಕಾಲೇಜಲ್ಲಿ ಹೊಡೆದಾಡಿ ಡಾನ್‌ ಆಗಬೇಕು ಅಂತಿದಿಯಾ?’ ಎನ್ನುವ ಡಾಲಿ ಧನಂಜಯ ಡೈಲಾಗ್‌ಗೆ ಪ್ರತಿಯಾಗಿ ‘ಸೀಟಿಗೆ ಹೊಡೆದಾಡುವನು ಡಾನ್‌, ಅದರ ಮೇಲೆ ಕುಳಿತುಕೊಳ್ಳುವನು...ನಾನು’ ಎಂದು ಕೌಂಟರ್‌ ಕೊಡುವ ‘ಯುವರತ್ನ’ನ ಡೈಲಾಗ್‌ ಸಖತ್ತಾಗಿದೆ. ಹಾಗೆಯೇ ನಾಯಕಿಸಯೇಷಾ ಸೆಹಗಲ್‌, ಪುನೀತ್‌ ನೋಡಿ ‘ನೀವು ನೋಡಲು ಅಣ್ಣಾವ್ರ ಥರನೇ ಇದೀರಾ’ ಎಂದು ಹೊಗಳಿದರೆ, ಪುನೀತ್‌ ಪ್ರತಿಯಾಗಿ ‘ಥ್ಯಾಂಕ್ಯು, ಆದರೆ, ನೀವು ನನ್ನನ್ನು ಅಣ್ಣ ಅನ್ಕೊಬೇಡಿ’ ಎಂದು ಕೊಡುವ ಚಮಕ್‌ ಡೈಲಾಗ್‌ಗಳು ಗಮನ ಸೆಳೆಯುತ್ತವೆ. ಈ ಟೀಸರ್‌ನಲ್ಲಿ ರೋಮಾಂಚನಕಾರಿಸಾಹಸ ದೃಶ್ಯಗಳು, ಮನಸಿಗೆ ಖುಷಿ ಕೊಡುವ ಡಾನ್ಸ್‌, ಕಲರ್‌ಪುಲ್‌ ದೃಶ್ಯಗಳು ಭರಪೂರವಾಗಿವೆ.

‘ಕಷ್ಟ ಬಂದಾಗ ಹೆದುರ್ಕೋಳೊರು ಕಾಮನ್‌, ಎಲ್ಲನೂ ಎದುರಿಸಿ ಮುಂದೆ ನಿಲ್ಲೋನು ನಂಬರ್‌ 1’ ಒಕ್ಕಣೆಯಿಂದ ಜೇಮ್ಸ್‌ ಚಿತ್ರದಮೋಷನ್‌ ಪೋಸ್ಟರ್‌ಶುರುವಾಗುತ್ತದೆ. ಕಾರಿನಲ್ಲಿ ಟ್ರಕ್‌ವೊಂದನ್ನು ಬೆನ್ನಟ್ಟಿ ಹೋಗುವಜೇಮ್ಸ್‌, ಅದನ್ನು ಸೇತುವೆಮೇಲೆ ಅಡ್ಡಗಟ್ಟಿ ಮೆಷಿನ್‌ ಗನ್ನಿನಿಂದ ಭಸ್ಮ ಮಾಡುವ ದೃಶ್ಯ ಸಿನಿ ರಸಿಕರಿಗೆ ಮುದನೀಡುವಂತಿದೆ. ಈ ಮೋಷನ್‌ ಪೋಸ್ಟರ್‌ ಬಿಡುಗಡೆಯಾದ ಹತ್ತು ನಿಮಿಷಗಳಲ್ಲಿ 27 ಸಾವಿರಕ್ಕೂ ಹೆಚ್ಚು ಮಂದಿ ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದರು. 24 ತಾಸು ಕಳೆಯುವುದರೊಳಗೆ 4 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ‘ಜೇಮ್ಸ್’ಗೆ‘ಬಹದ್ದೂರ್‌’ ಖ್ಯಾತಿಯ ಚೇತನ್‌ ಕುಮಾರ್‌ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವೂ ಚೇತನ್‌ ನಿಭಾಯಿಸಿದ್ದಾರೆ.

ಐತಿಹಾಸಿಕ ಸಿನಿಮಾದಲ್ಲಿ ಪುನೀತ್‌?

ಪುನೀತ್‌ ಹುಟ್ಟುಹಬ್ಬಕ್ಕೆ ಶುಭಕೋರಿರುವನಿರ್ದೇಶಕ ಮತ್ತು ಪೊಸ್ಟರ್‌ ವಿನ್ಯಾಸಕ ಸಾಯಿಕೃಷ್ಣಎನ್‌. ರೆಡ್ಡಿ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪೋಸ್ಟರ್‌ವೊಂದು ಸಿನಿರಸಿಕರ ಗಮನ ಸೆಳೆಯುವಂತಿದೆ.

ಪುನೀತ್‌ ಅವರ ಮುಂಬರುವ ಹೊಸ ಚಿತ್ರ ಐತಿಹಾಸಿಕ ಕಥೆ ಆಧರಿಸಿರಬಹುದೇ ಎನ್ನುವ ಕುತೂಹಲವನ್ನು ಇದು ಹುಟ್ಟುಹಾಕಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇರುವ,ಎರಡೂ ಕೈಯಲ್ಲಿ ಪುನೀತ್‌ ಖಡ್ಗ ಹಿಡಿದು ಕತ್ತಿವರಸೆ ಯುದ್ಧದಲ್ಲಿ ಶತ್ರುಗಳ ಸಂಹಾರ ನಡೆಸುತ್ತಿರುವ ಕಲಾತ್ಮಕ ಪೋಸ್ಟರ್‌ ಅನ್ನುನೆಟ್ಟಿಗರು ಇಷ್ಟಪಟ್ಟಿದ್ದಾರೆ.

ಆದರೆ, ‌ಸಾಯಿ ಕೃಷ್ಣ ಅವರು ‘ಇದು ಚಿತ್ರದ ಫಸ್ಟ್‌ ಲುಕ್‌ ಅಲ್ಲ, ಇದು ಕನಸಿನ ನೋಟ’ ಎನ್ನುವ ಒಕ್ಕಣೆಯೊಂದಿಗೆ ಟ್ವೀಟ್‌ ಮಾಡಿದ್ದಾರೆ.

‘ಪುನೀತ್‌ ಸದ್ಯಕ್ಕೆ ಯಾವುದೇ ಐತಿಹಾಸಿಕ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ‘ಜೇಮ್ಸ್‌’ ಚಿತ್ರ ಮುಗಿದ ನಂತರ ಸ್ವಂತ ನಿರ್ಮಾಣ ಸಂಸ್ಥೆ ಪಿಆರ್‌ಕೆ ಪ್ರೊಡಕ್ಷನ್‌ನಡಿ ಸಿನಿಮಾ ಮಾಡಲಿದ್ದಾರೆ. ಆ ಚಿತ್ರವನ್ನು ‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯಪ್ರಕಾಶ್‌ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಟೈಟಲ್‌ ಇನ್ನೂ ಅಂತಿಮಗೊಂಡಿಲ್ಲ’ ಎಂದು ಪುನೀತ್‌ ಅವರ ಆಪ್ತ ಮೂಲಗಳು ‘ಪ್ರಜಾಪ್ಲಸ್‌’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT