ಶುಕ್ರವಾರ, ಮಾರ್ಚ್ 5, 2021
30 °C

ನಿರಂಜನ್ ನಟನೆಯ 'ಸೂಪರ್‌ಸ್ಟಾರ್‌’ಗೆ ಝಾರ ಯಾಸ್ಮಿನ್ ನಾಯಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂದನವನದ ಖ್ಯಾತ ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ‘ಸೂಪರ್‌ಸ್ಟಾರ್’ ಸಿನಿಮಾದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈ ಸಿನಿಮಾದ ಫಸ್ಟ್‌ಲುಕ್ ಹಾಗೂ ಚಿತ್ರ ಶೀರ್ಷಿಕೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು ಚಿತ್ರತಂಡ. ಆದರೆ ಚಿತ್ರಕ್ಕೆ ನಾಯಕಿ ಯಾರು ಎಂಬ ಕುತೂಹಲವನ್ನು ಹಾಗೇ ಉಳಿಸಿತ್ತು. ಈಗ ಈ ಯುವನಟನಿಗೆ ನಾಯಕಿ ಸಿಕ್ಕಿದ್ದಾರೆ. ಮಾಡೆಲ್‌ ಹಾಗೂ ನಟಿಯಾಗಿರುವ ಝಾರ ಯಾಸ್ಮಿನ್ ಸೂಪರ್‌ಸ್ಟಾರ್‌ನಲ್ಲಿ ನಿರಂಜನ್‌ಗೆ ಜೋಡಿಯಾಗಿಲಿದ್ದಾರೆ. ಇದು ಚಂದನವನದಲ್ಲಿ ಆಕೆಗೆ ಚೊಚ್ಚಲ ಸಿನಿಮಾ. ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಈ ಸಿನಿಮಾದಲ್ಲಿ ನಿರಂಜನ್‌ ಡಾನ್ಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕಾಗಿ ಭರ್ಜರಿ ತಯಾರಿಯನ್ನೂ ನಡೆಸಿದ್ದಾರೆ.

ಮಂಗಳೂರಿನಲ್ಲಿ ನಡೆಯಲಿರುವ ಮೂರನೇ ಹಂತದ ಶೂಟಿಂಗ್‌ನಲ್ಲಿ ಝಾರ ಭಾಗವಹಿಸಲಿದ್ದಾರೆ. ಮೂರನೇ ಹಂತದ ಶೂಟಿಂಗ್‌ ಜನವರಿ ಮೊದಲ ವಾರದಿಂದ ಆರಂಭವಾಗಲಿದೆ. ಈ ಚಿತ್ರದಲ್ಲಿ ನೃತ್ಯನಿರ್ದೇಶಕ ಹಾಗೂ ನಟ ಸುಂದರ್ ಮೂಗೂರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಹಿಂದೆ ನಟಿ ಹಾಗೂ ಚಿಕ್ಕಮ್ಮ ಪ್ರಿಯಾಂಕ ಉಪೇಂದ್ರ ನಟಿಸಿರುವ ‘ಸೆಕೆಂಡ್ ಹಾಫ್’ ಚಿತ್ರದಲ್ಲಿ ನಿರಂಜನ್ ಮುಖ್ಯಪಾತ್ರವೊಂದರಲ್ಲಿ ನಟಿಸಿದ್ದರು. ಝಾರ ಹಲವು ಮ್ಯೂಸಿಕ್ ವಿಡಿಯೊಗಳಲ್ಲಿ ನಟಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು