‘ಝೀರೋ’ಗೆ ಅಭಿಮಾನಿಗಳು ಫಿದಾ

7

‘ಝೀರೋ’ಗೆ ಅಭಿಮಾನಿಗಳು ಫಿದಾ

Published:
Updated:

ಹೆಚ್ಚುಕಮ್ಮಿ ಒಂದು ವರ್ಷಕ್ಕೂ ಅಧಿಕ ಕಾಲ ಬ್ರೇಕ್ ತೆಗೆದುಕೊಂಡಿದ್ದ ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ ಬಹು ನಿರೀಕ್ಷಿತ ಸಿನಿಮಾ ‘ಝೀರೋ’ದ ಮೂಲಕ ತೆರೆಗೆ ಬರಲು ಸಜ್ಜಾಗತ್ತಿದ್ದು, ಅದರ ಟ್ರೇಲರ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು (ನವೆಂಬರ್ 2) 3 ನಿಮಿಷ 15 ಸೆಕೆಂಡ್‌ವುಳ್ಳ ಟ್ರೇಲರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಅದಕ್ಕೆ ಎಲ್ಲೆಡೆ ರೆಸ್ಪಾನ್ಸ್ ಸಖತ್ ಆಗಿಯೇ ವ್ಯಕ್ತವಾಗುತ್ತಿದ್ದು, ಇವರೆಗೆ 3 ಕೋಟಿಗೂ ಅಧಿಕ ಮಂದಿ ಟ್ರೇಲರ್‌ ವೀಕ್ಷಿಸಿದ್ದಾರೆ. 

ಟ್ರೇಲರ್‌ ಟ್ರೆಂಡಿಂಗ್‌ನಲ್ಲಿ ‘ಝೀರೋ’ ಮೊದಲ ಸ್ಥಾನದಲ್ಲಿದ್ದು, ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ಈ ಟ್ರೇಲರ್ ದುಪ್ಪಟ್ಟುಗೊಳಿಸಿದೆ. ಈ ಸಿನಿಮಾದಲ್ಲಿ ‘ಬಾವ್ವಾ ಸಿಂಗ್’ (ಕುಳ್ಳ) ಪಾತ್ರದಲ್ಲಿ ಖಾನ್, ಸರಿಯಾಗಿ ಮಾತನಾಡಲು ಹಾಗೂ ನಡೆಯಲಾಗದ ವಿಜ್ಞಾನಿ ‘ಆಫಿಯಾ ಯುಸುಫ್‌ಜೈ ಬಿಂದೆರ್’ ಪಾತ್ರದಲ್ಲಿ ನಟಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಕೈಫ್ ಸಹ ಬಾಲಿವುಡ್‌ ನಟಿ ‘ಬಬಿತಾ’ ಪಾತ್ರದಲ್ಲಿ ನಟಿಸಿದ್ದಾರೆ.

ಶಾರುಖ್ ಪತ್ನಿ ಗೌರಿ ಖಾನ್ ಒಡೆತನದ ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡಿದೆ. ರೊಮ್ಯಾಂಟಿಕ್ ನಾಟಕ ಕಥೆಯನ್ನಾಧರಿಸಿದ ಚಿತ್ರ ಇದಾಗಿದ್ದು, ಹಿಮಾನ್ಶು ಶರ್ಮಾ ಕಥೆಯನ್ನು ಹೆಣೆದಿದ್ದಾರೆ. ಆನಂದ್ ಎಲ್ ರೈ ಅವರು ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್‌ 21ಕ್ಕೆ ಚಿತ್ರವು ವಿಶ್ವದಾದ್ಯಂತ ತೆರೆ ಕಾಣಲಿದೆ. ಸುಮಾರು ₹ 200 ಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಶಾರುಖ್ ಖಾನ್ ಅಭಿನಯದ ಅತಿ ದೊಡ್ಡ ಬಜೆಟ್‌ನ ಚಿತ್ರ ಇದಾಗಿದೆ.

ಟ್ರೇಲರ್‌ ಬಗ್ಗೆ ಅಮೀರ್ ಖಾನ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾರುಖ್, ಅನುಷ್ಕಾ, ಕತ್ರಿನಾ ಅವರ ಅಭಿನಯ ಹಾಗೂ ಆನಂದ್ ಅವರ ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಣವೀರ್ ಸಿಂಗ್ ಜೊತೆ ಮದುವೆ ಸಂಭ್ರಮದಲ್ಲಿ ದೀಪಿಕಾ ಪಡುಕೋಣೆ ಬಗ್ಗೆಯೂ ಶಾರುಖ್ ಮಾತನಾಡಿದ್ದು, ‘ನನ್ನ ಜೊತೆ ಕೆಲಸ ಮಾಡಿದ ನಾಯಕಿಯರು ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿದ್ರೆ ಎಮೋಷನಲ್ ಆಗುತ್ತೇನೆ. ದೀಪಿಕಾ ಮದುವೆ ವಿಚಾರ ಕೇಳಿ ಎಮೋಷನಲ್ ಆದೆ. ಅವರನ್ನು ಅಪ್ಪಿಕೊಂಡು ಶುಭಕೋರಬೇಕು ಎಂದುಕೊಂಡೆ. ಆದರೆ, ಅದು ಆಗಲಿಲ್ಲ’ ಎಂದು ಬೇಸರದಿಂದ ತಮಾಷೆ ಮಾಡಿದರು.

‘ಶ್ರೀದೇವಿ, ಮಾಧುರಿ ದೀಕ್ಷಿತ್ ನನ್ನ ಜೊತೆ ನಟಿಸಿದ ಮೊದಲ ಜನರೇಷನ್ ನಾಯಕಿಯರು. ಅವರೆಲ್ಲರೂ ಮದುವೆಯಾಗಿ, ಅವರಿಗೆ ಮಕ್ಕಳಾಗಿದ್ದಾರೆ. ಅವರ ಮಕ್ಕಳು ಈಗ ನಾಯಕಿಯರಾಗಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಸೆಕೆಂಡ್ ಜನರೇಷನ್ ನಾಯಕಿಯರಾದ ಐಶ್ವರ್ಯಾ ರೈ, ಕರೀನಾ ಕಪೂರ್ ಮದುವೆ ಮಾಡಿಕೊಂಡಿದ್ದಾರೆ. ಈಗ ಮೂರನೇ ಜನರೇಷನ್ ನಾಯಕಿಯರೂ ಮದುವೆ ಆಗುತ್ತಿದ್ದಾರೆ. ಹಾಗಾಗಿ ನಂಗೆ ಖುಷಿ ಜೊತೆಗೆ ಬೇಜಾರು ಇದೆ. ಎಲ್ಲರೂ ತಮ್ಮದೇ ಶೈಲಿಯಲ್ಲಿ ವಿವಾಹವಾಗುತ್ತಿದ್ದಾರೆ. ನಾನೇನು ಮಾಡಲಿ, ನಾನು ಯಾರನ್ನು ಮದುವೆ ಆಗುವುದಕ್ಕೆ ಆಗಲ್ವೇ’ ಎಂದು ನಗೆ ಚಟಾಕಿ ಹಾರಿಸಿದರು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !