`ಇಷ್ಟ~
ವಿಜಯ್‌ಕುಮಾರ್ ಛಾಬ್ರಿಯಾ ನಿರ್ಮಾಣದಲ್ಲಿ ಆರ್.ಪಿ.ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರ `ಇಷ್ಟ~. ಸಂತೋಷ್ ಮತ್ತು ಭೂಮಿಕಾ ಛಾಬ್ರಿಯಾ, ನಾಯಕ- ನಾಯಕಿಯರಾಗಿ ನಟಿಸಿರುವ ಈ ಚಿತ್ರಕ್ಕೆ ಮಹದೇಶ್ ಸಿ.ಎಸ್ ಛಾಯಾಗ್ರಹಣವಿದೆ.

ಇಂದ್ರಾಣಿ ಛಾಬ್ರಿಯಾ ಮತ್ತು ಎಂ.ಸಂಜೀವ್ ಸಂಗೀತ ನೀಡಿದ್ದಾರೆ. ಹೈಟ್ ಮಂಜು ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಚಿತ್ರಕ್ಕಿದೆ. ರವಿತೇಜ, ಹೊನ್ನವಳ್ಳಿ ಕೃಷ್ಣ, ಶಿವರಾಮ್, ಶ್ರೀಕಾಂತ್ ಹೆಬ್ಳಿಕರ್, ಕರಿಬಸವಯ್ಯ, ಪ್ರೇಮಲತಾ ತಾರಾಬಳಗದಲ್ಲಿದ್ದಾರೆ.

`ನಾನಲ್ಲ~
ದಿನೇಶ್ ಬಾಬು ನಿರ್ದೇಶನದಲ್ಲಿ ತರುಣ್ ನಾಯಕರಾಗಿ ನಟಿಸಿರುವ ಥ್ರಿಲ್ಲರ್ ಚಿತ್ರ `ನಾನಲ್ಲ~. ಡಿ.ಬಿ.ಕುಮಾರಸ್ವಾಮಿ ಚಿತ್ರದ ನಿರ್ಮಾಪಕರು. ಹಲವು ವರ್ಷಗಳ ಬಳಿಕ ನಟಿ ಖುಷ್ಬೂ ಈ ಚಿತ್ರದ ಮೂಲಕ ಕನ್ನಡದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ, ಭರಚುಕ್ಕಿ ಮುಂತಾದಕಡೆ ಚಿತ್ರೀಕರಣ ನಡೆಸಲಾಗಿದೆ.

ಅನಂತನಾಗ್, ಶುಭಾ ಪೂಂಜಾ, ರಂಗಾಯಣ ರಘು, `ಮುಖ್ಯಮಂತ್ರಿ~ ಚಂದ್ರು, ಸಿಹಿಕಹಿ ಚಂದ್ರು, ಬ್ಯಾಂಕ್ ಜನಾರ್ದನ್ ನಟಿಸಿದ್ದಾರೆ. ಗಿರಿಧರ್ ದಿವಾನ್ ಸಂಗೀತ, ಸುರೇಶ್ ಬೈರಸಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

`ತಾರೆ~
ಶಿವರಾಜ್ ಹೊಸಕೆರೆ ನಿರ್ದೇಶನದ ಚಿತ್ರ `ತಾರೆ~. ರವೀಶ್ ಮತ್ತು ವಿನಯ್ ಆರ್. ಚಿತ್ರದ ನಿರ್ಮಾಪಕರು. ದಾವಣಗೆರೆ, ಮಧುಗಿರಿ, ಚಿಕ್ಕಮಗಳೂರು, ಬೆಂಗಳೂರು, ಕೆಮ್ಮಣ್ಣುಗುಂಡಿ ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ. ದಿಗಂತ್ ನಾಯಕರಾಗಿರುವ ಈ ಚಿತ್ರಕ್ಕೆ ಮುಂಬೈ ಬೆಡಗಿ ಊರ್ವಶಿ ನಾಯಕಿ. ಕಥೆ ಕೆ.ಕೆ. ರವೀಶ್ ಅವರದು. ಸಂಜನಾ, ಪ್ರೊ.ದೊಡ್ಡರಂಗೇಗೌಡ, ಕರಿಬಸವಯ್ಯ, ಟೆನ್ನಿಸ್ ಕೃಷ್ಣ, ರೇಖಾದಾಸ್ ತಾರಾಬಳಗದಲ್ಲಿದ್ದಾರೆ.

ಸಿ.ಆರ್.ಬಾಬಿ ಸಂಗೀತಕ್ಕೆ ಜಯಂತ್ ಕಾಯ್ಕಿಣಿ, ಹೃದಯಶಿವ, ನಾಗೇಂದ್ರಪ್ರಸಾದ್, ಪ್ರೊ.ದೊಡ್ಡರಂಗೇಗೌಡ ಮತ್ತು ನವೀನ್ ಗೀತೆಗಳನ್ನು ರಚಿಸಿದ್ದಾರೆ. ಆರ್. ರಮೇಶ್ ಛಾಯಾಗ್ರಹಣ, ದೇವ್ ಸಂಪತ್ ಮತ್ತು ಫೈವ್‌ಸ್ಟಾರ್ ಗಣೇಶ್ ನೃತ್ಯಸಂಯೋಜನೆ ಚಿತ್ರಕ್ಕಿದೆ.

`ರೋಮಿಯೋ~ ದ್ವಿತೀಯ ಹಂತದ ಚಿತ್ರೀಕರಣ

ಗಣೇಶ್ ಅಭಿನಯದ `ರೋಮಿಯೋ~ ಚಿತ್ರದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಿದೆ. ಬೆಂಗಳೂರಿನಲ್ಲಿ ನವೆಂಬರ್ ಎರಡನೇ ವಾರದವರೆಗೂ ಮಾತಿನ ಭಾಗದ ಚಿತ್ರೀಕರಣ ನಡೆಯಲಿದೆ. ಗಣೇಶ್, ಭಾವನಾ, ಸಾಧುಕೋಕಿಲಾ, ರಂಗಾಯಣ ರಘು, ಅವಿನಾಶ್, ಸಾಧುಕೋಕಿಲಾ, ಸುಧಾ ಬೆಳವಾಡಿ ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ಪಿ.ಸಿ. ಶೇಖರ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.

ನವೀನ್ ಮತ್ತು ರಮೇಶ್ ಕುಮಾರ್ ಚಿತ್ರದ ನಿರ್ಮಾಪಕರು. ಸಂಭಾಷಣೆ ನಟರಾಜ್ ಅವರದು. ಸಂಗೀತ ನಿರ್ದೇಶಕ ಅರ್ಜುನ್‌ಜನ್ಯ ಏಳು ಹಾಡುಗಳಿಗೆ ಸಂಗೀತ ಹೆಣೆದಿದ್ದಾರೆ. ಒಂದು ಹಾಡಿನ ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಹಾಡುಗಳ ಚಿತ್ರೀಕರಣ ಡಿಸೆಂಬರ್‌ನಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.