`ಅಣ್ಣಾ ಬಾಂಡ್~ ಚಿತ್ರದ ನಂತರ ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ ಹೊಸ ಚಿತ್ರ `ಯಾರೇ ಕೂಗಾಡಲಿ~ ಸೆಟ್ಟೇರಿದೆ. ಪುನೀತ್ ಅವರೊಂದಿಗೆ ನಟ ಯೋಗೀಶ್ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಕಳೆದ ವಾರ ಬೆಂಗಳೂರಿನ ಸದಾಶಿವನಗರದ ರಾಜಕುಮಾರ್ ನಿವಾಸದಲ್ಲಿ ಚಿತ್ರದ ಮುಹೂರ್ತ ನಡೆಯಿತು. ಪಾರ್ವತಮ್ಮ ರಾಜಕುಮಾರ್ ನಿರ್ಮಿಸುತ್ತಿರುವ ಈ ಚಿತ್ರದ ಆರಂಭಿಕ ದೃಶ್ಯಕ್ಕೆ ನಟ ರವಿಚಂದ್ರನ್ ಆರಂಭ ಫಲಕ ತೋರಿಸಿದರು.

`ಯಾರೇ ಕೂಗಾಡಲಿ~ ತಮಿಳಿನ `ಪೊರಾಲಿ~ ಚಿತ್ರದ ರೀಮೇಕ್. ಮೂಲ ಚಿತ್ರದ ನಿರ್ದೇಶಕರಾದ ಸಮುದ್ರಖಣಿ ಅವರೇ ಕನ್ನಡದ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯೂ ಅವರದ್ದೇ.

ಗುರುಪ್ರಸಾದ್ ಸಂಭಾಷಣೆ, ಹರಿಕೃಷ್ಣ ಸಂಗೀತ, ಸುಕುಮಾರ್ ಛಾಯಾಗ್ರಹಣ ಹಾಗೂ ರವಿವರ್ಮರ ಸಾಹಸ `ಯಾರೇ ಕೂಗಾಡಲಿ~ ಚಿತ್ರಕ್ಕಿದೆ.ನಿರ್ಮಾಪಕರಾದ ಎಸ್.ಎ. ಗೋವಿಂದರಾಜ್, ರಾಕ್ಲೈನ್ ವೆಂಕಟೇಶ್, ಕೆ. ಮಂಜು, ಶ್ರೀಕಾಂತ್, ಟಿ.ಸಿ. ಸಿದ್ಧರಾಜು ಹಾಗೂ ಕೈಗಾರಿಕೋದ್ಯಮಿ ಜಿ.ಪಿ. ನಾರಾಯಣಸ್ವಾಮಿ, ನಿರ್ದೇಶಕರಾದ ಎಂ.ಎಸ್. ರಾಜಶೇಖರ್, ಮಾದೇಶ್, ಸೂರಿ, ಮುಂತಾದವರು `ಯಾರೇ ಕೂಗಾಡಲಿ~ ಮುಹೂರ್ತ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರದ ಚಿತ್ರೀಕರಣವು ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.