ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತನ್ನದೇ ಫೋಟೊಗಳನ್ನು ಬಳಸಿ ತಯಾರಿಸಿದ ಉಡುಗೆ ತೊಟ್ಟ ಉರ್ಫಿ ಜಾವೇದ್

Last Updated 30 ಮಾರ್ಚ್ 2022, 11:25 IST
ಅಕ್ಷರ ಗಾತ್ರ

ಬೆಂಗಳೂರು: ಆಧುನಿಕ ಫ್ಯಾಷನ್ ಮತ್ತು ಟ್ರೆಂಡ್ ಹೆಸರಿನಲ್ಲಿ ವಿಶಿಷ್ಟ ವಿನ್ಯಾಸದ ಉಡುಪು ಧರಿಸುವುದರಲ್ಲಿ ನಟಿ ಉರ್ಫಿ ಜಾವೇದ್ ಎತ್ತಿದ ಕೈ!

ಅದರಲ್ಲೂ, ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಫೋಟೊ, ವಿಡಿಯೊಗಳು ವೈರಲ್ ಆಗುವ ಜತೆಗೇ, ಟ್ರೋಲ್ ಕೂಡ ಆಗುತ್ತವೆ.

ಈ ಬಾರಿ ಉರ್ಫಿ ಜಾವೇದ್ ಅವರು, ತಮ್ಮದೇ ಫೋಟೊಗಳ ಪ್ರಿಂಟ್ ಬಳಸಿ ತಯಾರಿಸಿದ ಉಡುಪು ಧರಿಸಿ ಮತ್ತೆ ಟ್ರೋಲ್‌ಗೆ ಸಿಲುಕಿದ್ದಾರೆ.

ಮೈಮುಚ್ಚುವಷ್ಟೇ ಫೋಟೊ ಬಳಸಿ, ಅದರಿಂದ ವಸ್ತ್ರ ತಯಾರಿಸಲಾಗಿದ್ದು, ಅದನ್ನು ಧರಿಸಿ ಉರ್ಫಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.

ಅಂದಹಾಗೆ, ಈ ವಿನ್ಯಾಸದ ವಿಚಾರ ಹೊಳೆದಿದ್ದು ಇಂಟರ್‌ನೆಟ್ ನೋಡಿದ ಬಳಿಕವಂತೆ.. ಈ ಬಗ್ಗೆ ಉರ್ಫಿ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ.

ಆನ್‌ಲೈನ್‌ನಲ್ಲಿ ಈ ವಿನ್ಯಾಸ ನೋಡಿದ ಬಳಿಕ ತಾನೇಕೆ ಟ್ರೈ ಮಾಡಬಾರದು ಎಂದು ಎನಿಸಿತು. ಅದೇ ರೀತಿ ಪ್ರಯತ್ನಿಸಿದ್ದು, ಅದರ ಫಲಿತಾಂಶ ಇಲ್ಲಿದೆ ಎಂದು ಉರ್ಫಿ ವಿಡಿಯೊ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT