ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೇಕ್ಷಕರಿಗೆ ಇಷ್ಟವಾಯ್ತು ಕಂಗನಾರ ‘ಲಾಕ್‌ ಅಪ್‌’

Last Updated 3 ಮಾರ್ಚ್ 2022, 12:18 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ‘ಲಾಕ್‌ ಅಪ್‌’ ರಿಯಾಲಿಟಿ ಶೋಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಎರಡು ಎಪಿಸೋಡ್‌ಗಳು ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿವೆ.

‘ಲಾಕ್‌ ಅಪ್‌’ ರಿಯಾಲಿಟಿ ಶೋ ಬಿಡುಗಡೆಗೆ ಮುನ್ನ ಟೀಕೆಗಳು ಕೇಳಿಬಂದಿದ್ದವು. ಇದು ’ಬಿಗ್‌ಬಾಸ್‌’ನಂತೆ ಇರುವ ಶೋ, ಇದರಲ್ಲಿ ಹೊಸತನ ಇಲ್ಲ ಎಂದು ನೆಟ್ಟಿಗರು ಟೀಕೆ ಮಾಡಿದ್ದರು. ಆದರೆ ಇದರ ವೀಕ್ಷಣೆ ಕೋಟಿ ದಾಟಿರುವುದನ್ನು ಗಮನಿಸಿದರೆ ಈ ರಿಯಾಲಿಟಿ ಶೋ ಯಶಸ್ವಿಯಾಗಿದೆ ಎಂದು ನಿರ್ಮಾಪಕಿಏಕ್ತಾ ಕಪೂರ್‌ ಹೇಳಿದ್ದಾರೆ.

‘ಲಾಕ್ ಅಪ್’ ಶೋ ಅನ್ನುಏಕ್ತಾ ಕಪೂರ್‌ನಿರ್ಮಾಣ ಮಾಡಿದ್ದಾರೆ. ಎಂಎಕ್ಸ್ ಪ್ಲೇಯರ್ ಹಾಗೂ ಆಲ್ಟ್ ಬಾಲಾಜಿ ಓಟಿಟಿಗಳಲ್ಲಿ ಫೆಬ್ರುವರಿ 27ರಿಂದ ’ಲಾಕ್‌ ಅಪ್‌’ ಪ್ರಸಾರವಾಗುತ್ತಿದೆ.

ಈ ಶೋನಲ್ಲಿ 16 ಮಂದಿ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಎಲ್ಲರೂ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಅವರಿಗೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಇದರ ಆಧಾರದಲ್ಲಿ ಸ್ಪರ್ಧೆ ನಡೆಯುತ್ತದೆ.

ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಂಗನಾ ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ. ತಪ್ಪು ಮಾಡಿದ ಸ್ಪರ್ಧಿಗಳ ವಿರುದ್ಧ ಅವರು ಕ್ರಮ ಜರುಗಿಸುತ್ತಾರೆ. ಒಟ್ಟು 72 ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.

ನಟಿ ಪೂನಂ ಪಾಂಡೆ, ಕುಸ್ತಿಪಟು ಬಬಿತಾ ಪೋಗಟ್, ಟಿವಿ ನಟರಾದ ನಿಶಾ ರಾವಲ್, ಕರಣ್ವೀರ್ ಬೋಹ್ರಾ, ಸಾರಾ ಖಾನ್‌, ಸಿದ್ಧಾರ್ಥ್‌ ಶರ್ಮಾ, ತೇಹಸೀನ್‌ ಪೂನಾವಾಲ, ಪಾಯಲ್‌ ರೋಹ್ಟಗಿ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರುಕಿ, ಸ್ವಾಮೀಜಿ ಚಕ್ರಪಾಣಿ, ವಿನ್ಯಾಸಕಿ ಸೈಶಾ ಶಿಂದೆ, ಶಿವಂ ಶರ್ಮಾ, ಅಂಜಲಿ ಆರೋರ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT