ಕ್ರಿಕೆಟರ್ ಆಗಬೇಕೆಂಬ ಗುರಿ ಹೊಂದಿರುವ ಯುವಕ ಹಾಗೂ ಇಬ್ಬರು ಯುವತಿಯರ ಸುತ್ತ ಸುತ್ತುವ ಕಥೆಯ ತಿರುಳು ಹೊಂದಿರುವ ಹಾಸ್ಯ ಸಿನಿಮಾ 'ಲವ್ ಒಟಿಪಿ' ಜನವರಿ 30ರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿದೆ.

'ಅನೀಶ್ ತೇಜೇಶ್ವರ್' ನಿರ್ದೇಶನದ ಎರಡನೇ ಸಿನಿಮಾ ಲವ್ ಒಟಿಪಿ 2025ರ ನವೆಂಬರ್ 14ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಂಡಿದೆ. ಆದರೆ ಬಾಕ್ಸ್ ಆಫೀಸ್ನಲ್ಲಿ ಅಷ್ಟೇನೂ ಯಶಸ್ವಿಯಾಗಲಿಲ್ಲ. ಇದೀಗ ಜನವರಿ 30ರಿಂದ ಅಮೆಜಾನ್ ಪ್ರೈಮ್ನಲ್ಲಿ ಸಿನಿಮಾ ತೆರೆಕಂಡಿದೆ.
.OTT: ಪೊಲೀಸ್ ಇಲಾಖೆಯಲ್ಲಿನ ನೈಜ ಘಟನೆಯಾಧಾರಿತ ಸಿನಿಮಾ ‘ಸಿರೈ’ ಒಟಿಟಿಗೆ.
‘ಪುಷ್ಪ ಮುನಿರೆಡ್ಡಿ’ ಅವರ ‘ಭಾವಪ್ರೀತ ಪ್ರೊಡಕ್ಷನ್’ ಅಡಿ ವಿಜಯ್ ಎಂ.ರೆಡ್ಡಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸ್ವಾತಿ, ರಾಜೇವ್ ಕನಕಲ, ಜಾನ್ವಿ ಕಕಲಕೇರಿ, ಕೃಷ್ಣಭಟ್ ಸೇರಿದಂತೆ ಪ್ರಮುಖರು ನಟಿಸಿದ್ದಾರೆ.

ಕ್ರಿಕೆಟರ್ ಆಗಬೇಕೆಂದು ಕನಸು ಕಾಣುವ ನಾಯಕ ನಟ ಅಕ್ಷಯ್. ಕಾಲೇಜಿನಲ್ಲಿ ಆತನಿಗೆ ಸನಾ ಪರಿಚಯವಾಗುತ್ತಾಳೆ. ಆತನ ತಂದೆ ಇನ್ಸ್ಪೆಕ್ಟರ್ ಶಂಕರ್ಗೆ ಮಗ ಪ್ರೀತಿಯ ಬಲೆಯಲ್ಲಿ ಬೀಳುವುದು ಸ್ವಲ್ಪವೂ ಇಷ್ಟವಿಲ್ಲ. ಹೀಗಾಗಿ ಆಗಾಗ ಮಗನ ಮೊಬೈಲ್ ಪರೀಕ್ಷಿಸುತ್ತ ಇರುತ್ತಾರೆ. ಮಗನಿಗೆ ಅಪ್ಪನ ಮೇಲೆ ವಿಪರೀತ ಭಯ. ಇಷ್ಟಾಗಿಯೂ ಸನಾ ಜತೆಗಿನ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಅವರಿಬ್ಬರ ಪ್ರೇಮಕಥೆಯೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಎಲ್ಲೆಲ್ಲೋ ಸುತ್ತಿ ಎಲ್ಲಿಗೋ ಬರುವ, ಲಾಜಿಕ್ಗಳಿಲ್ಲದ ಕಥೆ ಪ್ರಾರಂಭದಲ್ಲಿ ತಾಳ್ಮೆ ಪರೀಕ್ಷಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.