ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್‌ಸ್ಟಾದಲ್ಲಿ 1 ಖಾತೆ ಫಾಲೊ ಮಾಡ್ತಿರುವ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಅಲ್ಲ!

Last Updated 14 ಜನವರಿ 2022, 9:10 IST
ಅಕ್ಷರ ಗಾತ್ರ

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರು 2021ರ ನವೆಂಬರ್ ನಲ್ಲಿ ತಮ್ಮ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದರು. ಆದಾದ ಸುಮಾರು ಎರಡು ತಿಂಗಳ ನಂತರ ಇದೀಗ ರಾಜ್ ಇನ್‌ಸ್ಟಾಗ್ರಾಂಗೆ ಮರಳಿದ್ದಾರೆ. ಅಶ್ಲೀಲ ಚಿತ್ರಗಳ ನಿರ್ಮಾಣ ಆರೋಪ ಪ್ರಕರಣದಲ್ಲಿ ಸಿಲುಕಿರುವ ಉದ್ಯಮಿ, ಸದ್ಯ ಇನ್‌ಸ್ಟಾಗ್ರಾಂನಲ್ಲಿ 9.77 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಅವರ ಪತ್ನಿ ಶಿಲ್ಪಾ ಶೆಟ್ಟಿ ಕೂಡ ಇವರನ್ನು ಅನುಸರಿಸುತ್ತಿದ್ದರೆ, ರಾಜ್ ಮಾತ್ರ ಅವರನ್ನು ಫಾಲೊ ಮಾಡುತ್ತಿಲ್ಲ.

ನಟಿ ಶಿಲ್ಪಾ ಶೆಟ್ಟಿ ಅವರ ಖಾತೆಯ ಬದಲಿಗೆ, ರಾಜ್ ಕುಂದ್ರಾ ಅವರು ಮತ್ತೊಂದು ಖಾತೆಯನ್ನು ಫಾಲೊ ಮಾಡುತ್ತಿರುವುದು ಕಂಡುಬಂದಿದೆ. ಒಂದು ವೇಳೆ ನೀವು ರಾಜ್ ಅವರ ಇನ್‌ಸ್ಟಾಗ್ರಾಂ ಖಾತೆಗೆ ಹೋದರೆ, ಅವರು ಇದೀಗ ಖಾತೆಯನ್ನು ಖಾಸಗಿಯಾಗಿ ಇರಿಸಿದ್ದಾರೆ. ಆದಾಗ್ಯೂ, ಅವರು ಇನ್‌ಸ್ಟಾಗ್ರಾಂನಲ್ಲಿ ಕೇವಲ ಒಬ್ಬರನ್ನು ಮಾತ್ರ ಫಾಲೊ ಮಾಡುತ್ತಿರುವುದು ಕಂಡುಬರುತ್ತದೆ. ನೀವು bastianmumbai ಎನ್ನುವ ಖಾತೆಯ ಫಾಲೊವರ್ಸ್‌ಗಳನ್ನು ನೋಡಿದರೆ ಅದರಲ್ಲಿ ರಾಜ್ ಅವರ ಹೆಸರನ್ನು ಕಾಣಬಹುದು. ಅಂದರೆ, ರಾಜ್ ತನ್ನ ಮತ್ತು ಶಿಲ್ಪಾ ಅವರ ರೆಸ್ಟೋರೆಂಟ್‌ನ ಖಾತೆಯನ್ನು ಇನ್‌ಸ್ಟಾಗ್ರಾಂನಲ್ಲಿ ಅನುಸರಿಸುತ್ತಿದ್ದಾರೆ.

ಅಶ್ಲೀಲ ಚಿತ್ರಗಳ ನಿರ್ಮಾಣ ಆರೋಪ ಎದುರಿಸುತ್ತಿರುವ ರಾಜ್ ಕುಂದ್ರಾ ಅವರು ಜೈಲಿನಲ್ಲಿದ್ದಾಗ, ಶಿಲ್ಪಾ ಶೆಟ್ಟಿ ತನ್ನ ಕಷ್ಟದ ಸಮಯದಲ್ಲಿ ಖಾಸಗಿತನದ ಹಕ್ಕನ್ನು ಎಲ್ಲರೂ ಗೌರವಿಸುವಂತೆ ವಿನಂತಿಸಿದ್ದರು. ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ದೀರ್ಘ ಟಿಪ್ಪಣಿಯನ್ನು ಬರೆದಿದ್ದರು.

‘ನನಗೆ ಮುಂಬೈ ಪೊಲೀಸ್‌ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆಯಿದೆ. ಒಂದು ಕುಟುಂಬವಾಗಿ, ನಾವು ಕಾನೂನು ಮೊರೆ ಹೋಗುತ್ತಿದ್ದೇವೆ. ನನ್ನ ಮಕ್ಕಳಿಗೋಸ್ಕರವಾದರೂ ಜನರು ನಮ್ಮ ಖಾಸಗಿತನವನ್ನು ಗೌರವಿಸಬೇಕು. ಒಬ್ಬಳು ತಾಯಿಯಾಗಿ ನಾನು ಈ ಮನವಿ ಮಾಡಿಕೊಳ್ಳುತ್ತಿದ್ದೇನೆ. ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ, ಅಪೂರ್ಣ ಮಾಹಿತಿ ಬಗ್ಗೆ ಪ್ರತಿಕ್ರಿಯಿಸಬೇಡಿ’ ಎಂದು ಅವರು ಕೋರಿದ್ದರು.

‘ನನ್ನ ಬಗ್ಗೆ ಮಾಧ್ಯಮಗಳು ಮತ್ತು ಕೆಲವರು ವಿನಾಕಾರಣ ಆರೋಪಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೇವಲ ನನ್ನ ಬಗ್ಗೆ ಮಾತ್ರವಲ್ಲದೇ ನನ್ನ ಕುಟುಂಬದವರ ಬಗ್ಗೆಯೂ ಟ್ರೋಲ್ ಮತ್ತು ಹಲವು ಪ್ರಶ್ನೆಗಳನ್ನು ಮಾಡಲಾಗುತ್ತಿದೆ. ನಾನು ಈ ಪ್ರಕರಣದ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸಿಲ್ಲ. ಹೇಳಿಕೆ ನೀಡಿಲ್ಲ. ಹಾಗಾಗಿ ನನ್ನ ಹೆಸರನ್ನು ಬಳಸಿ ಸುಳ್ಳು ಹೇಳಿಕೆಗಳನ್ನು ನೀಡಬೇಡಿ’ ಎಂದು ಅವರು ಮನವಿ ಮಾಡಿದ್ದರು.

ಕಿರಣ್ ಖೇರ್ ಮತ್ತು ಬಾದ್‌ಶಾ ಅವರೊಂದಿಗೆ ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ನಟಿ ಶಿಲ್ಪಾ ಶೆಟ್ಟಿ ಕೂಡ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT