ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರೇಕಪ್‌ ಸುದ್ದಿಯ ಬೆನ್ನಲ್ಲೇ ಸೆಲ್ಫಿ ಪೋಸ್ಟ್ ಮಾಡಿದ ನಟಿ ಶ್ರದ್ಧಾ ಕಪೂರ್

Published : 25 ಮಾರ್ಚ್ 2022, 7:26 IST
ಫಾಲೋ ಮಾಡಿ
Comments

ಬೆಂಗಳೂರು: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ವೈಯಕ್ತಿಕ ಜೀವನವನ್ನು ಅಭಿಮಾನಿಗಳ ಕಣ್ಣಿನಿಂದ ಸದಾ ಕಾಪಾಡಿಕೊಂಡು ಬಂದವರು.

ಆದರೆ ಅವರು, ಸೆಲೆಬ್ರಿಟಿ ಫೋಟೊಗ್ರಾಫರ್ ರೋಹನ್ ಶ್ರೇಷ್ಠ ಜತೆ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ಅವರು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ, ಶ್ರದ್ಧಾ ಆಪ್ತರಿಗೆ ಈ ವಿಚಾರ ತಿಳಿದಿದೆ.

ಬಾಲಿವುಡ್ ಅಂಗಳದಲ್ಲಿ ಕೇಳಿಬಂದಿರುವ ಸುದ್ದಿಯ ಪ್ರಕಾರ, ಶ್ರದ್ಧಾ ಮತ್ತು ರೋಹನ್ ಅವರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪಿಂಕ್‌ವಿಲ್ಲಾ ವರದಿ ಪ್ರಕಾರ, ಶ್ರದ್ಧಾ ಹುಟ್ಟುಹಬ್ಬಕ್ಕೂ ರೋಹನ್ ಹೋಗಿಲ್ಲ. ಅವರಿಬ್ಬರೂ ಕೆಲಸಮಯದ ಹಿಂದೆ ಬೇರೆಬೇರೆಯಾಗಿದ್ದಾರೆ ಎಂದಿದೆ.

ಆದರೆ ಈ ವಿಚಾರ ಚರ್ಚೆಯಾಗುತ್ತಿದ್ದಂತೆ, ಶ್ರದ್ಧಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸೆಲ್ಫಿ ಒಂದನ್ನು ಪೋಸ್ಟ್ ಮಾಡಿದ್ದು, ಮತ್ತೇನಾದರೂ ಕೇಳಿ ಎಂಬರ್ಥದಲ್ಲಿ ಅಡಿಬರಹ ನೀಡಿದ್ದಾರೆ.

ಒಟ್ಟಿನಲ್ಲಿ ಬ್ರೇಕಪ್ ವಿಚಾರವಾಗಿ ಶ್ರದ್ಧಾ ಅಧಿಕೃತವಾಗಿ ದೃಢಪಡಿಸಿಲ್ಲವಾದರೂ, ಆ ಬಗ್ಗೆ ಸ್ಪಷ್ಟನೆಯನ್ನೂ ನೀಡಿಲ್ಲ. ಹೀಗಾಗಿ ಅಭಿಮಾನಿಗಳು ಶ್ರದ್ಧಾ ಬಗ್ಗೆ ಯೋಚಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT