ನಾವು ಮೊದಲೇ ಹೇಳಿದಂತೆ ಸೀಸನ್ 2 ಹೊರ ತರುವುದಕ್ಕೆ ವಿಳಂಬ ಮಾಡಲಿಲ್ಲ. ಆದಷ್ಟು ಬೇಗ ಮತ್ತೆ ಬಂದಿದ್ದೇವೆ. ಪ್ರೇಕ್ಷಕರು ನಮ್ಮನ್ನು ಅವರ ಕುಟುಂಬದವರಂತೆ ನೋಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಎರಡನೇ ಸೀಸನ್‌ನ ಈ ಕಾರ್ಯಕ್ರಮದಲ್ಲಿ ಆಲಿಯಾ ಭಟ್, ಕರಣ್ ಜೋಹರ್, ಜೂನಿಯರ್ ಎನ್‌ಟಿಆರ್, ಜಾಹ್ನವಿ ಕಪೂರ್, ಸೈಫ್ ಅಲಿಖಾನ್ ಹಾಗೂ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.
ಕಪಿಲ್ ಜೊತೆ ಈ ಶೋನಲ್ಲಿ ಸುನಿಲ್ ಗ್ರೋವರ್, ಕೃಷ್ಣ ಅಭಿಷೇಕ್, ಅರ್ಚನಾ ಪುರಾಣ್ ಸಿಂಗ್, ಕಿಕು ಶಾರದಾ ಮತ್ತು ರಾಜೀವ್ ಠಾಕೂರ್ ಇದ್ದಾರೆ.