ಮಂಗಳವಾರ, ಅಕ್ಟೋಬರ್ 26, 2021
26 °C

ದುಬೈನಲ್ಲಿ ಐಶ್ವರ್ಯ ರೈ: ಮಾದಕ ಫೋಟೊ ಹಂಚಿಕೊಂಡ ಮೇಕಪ್ ಮ್ಯಾನ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ಯಾರಿಸ್‌ನಲ್ಲಿ ಕಳೆದ ಭಾನುವಾರ ಲೋರಿಯಲ್ ಆಯೋಜಿಸಿದ್ದ ‘ಪ್ಯಾರಿಸ್ ಫ್ಯಾಷನ್ ವೀಕ್‌’ನಲ್ಲಿ ನಟಿ ಐಶ್ವರ್ಯ ರೈ ಬಚ್ಚನ್ ಭಾಗವಹಿಸಿ ಗಮನ ಸೆಳೆದಿದ್ದರು.

ಇದೀಗ ಪ್ಯಾರಿಸ್‌ನಿಂದ ಸೀದಾ ದುಬೈಗೆ ಹಾರಿರುವ ಅವರು, ಅಲ್ಲಿನ ‘ದುಬೈ ಎಕ್ಸಪೋ’ದಲ್ಲಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮಕ್ಕೆ 47 ವರ್ಷದ ನಟಿ ವಿಶೇಷ ಉಡುಗೆಯಲ್ಲಿ ಕಂಗೊಳಿಸಿದ್ದು, ಅವರನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಕಪ್ಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದ ಐಶ್ವರ್ಯ ಅವರ ಫೋಟೊವನ್ನು ಅವರ ಮೇಕಪ್ ಮ್ಯಾನ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು ಅದು ಇದೀಗ ವೈರಲ್ ಆಗಿದೆ.

ದುಬೈ ಎಕ್ಸಪೋದಲ್ಲಿ ಮಾತನಾಡಿರುವ ಐಶ್ವರ್ಯ, ‘ರಸ್ತೆಗಳಲ್ಲಿ ಇಂದಿಗೂ ಮಹಿಳೆಯರೂ ಸುರಕ್ಷಿತವಲ್ಲ. ಇದೇ ವಿಚಾರದ ಬಗ್ಗೆ ಪ್ಯಾರಿಸ್ ಫ್ಯಾಶನ್ ಶೋದಲ್ಲಿ ಜಾಗೃತಿ ಮೂಡಿಸಲಾಗಿತ್ತು. ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವುದು ಇಂದಿನ ಅಗತ್ಯವಾಗಿದೆ’ ಎಂದಿದ್ದಾರೆ.

 

ಲೋರಿಯಲ್ ಪ್ಯಾರಿಸ್ ಬ್ರ್ಯಾಂಡ್ ರಾಯಭಾರಿಯೂ ಆಗಿರುವ ನಟಿ ಐಶ್ವರ್ಯ ರೈ ಬಚ್ಚನ್, ಶ್ವೇತ ವರ್ಣದ ಗೌನ್ ಧರಿಸಿ ರಾಂಪ್‌ನಲ್ಲಿ ಹೆಜ್ಜೆ ಹಾಕಿದ್ದರು.

ಅಂತರರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿಗಳು ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದರು. ಬ್ರಿಟಿಷ್ ನಟಿ ಹೆಲೆನ್ ಮಿರನ್ ಮತ್ತು ಕ್ಯಾಮಿಲಾ ಕಾಬೆಲೊ ಜತೆ ಐಶ್ವರ್ಯ ಹೆಜ್ಜೆ ಹಾಕಿದ್ದು, ಅವರ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು.

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಪ್ರಸಿದ್ಧ ಐಫೆಲ್ ಟವರ್ ಬಳಿ ಪ್ಯಾಷನ್ ವೀಕ್ ಆಯೋಜಿಸಲಾಗಿದ್ದು, ಹಾಲಿವುಡ್‌ನ ಖ್ಯಾತ ನಟ-ನಟಿಯರ ದಂಡೇ ಅಲ್ಲಿ ಸೇರಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು