ತಾತನಾಗುತ್ತಿದ್ದೇನೆ, ಆ ಸಂಭ್ರಮಕ್ಕೆ ತಯಾರಾಗುತ್ತಿದ್ದೇನೆ: ಅನಿಲ್ ಕಪೂರ್

ಬೆಂಗಳೂರು: ಮಗಳು ಸೋನಮ್ ಕಪೂರ್ ಗರ್ಭಿಣಿಯಾಗಿರುವ ವಿಚಾರ ಬಹಿರಂಗಪಡಿಸುತ್ತಿದ್ದಂತೆ ಬಾಲಿವುಡ್ ನಟ ಅನಿಲ್ ಕಪೂರ್ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.
ಅನಿಲ್ ಕಪೂರ್ ಮತ್ತು ಸುನಿತಾ ಕಪೂರ್ ಅವರು ಅಜ್ಜ–ಅಜ್ಜಿ ಆಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅನಿಲ್ ಕಪೂರ್ ಮತ್ತು ಸುನಿತಾ ಕಪೂರ್ ಇಬ್ಬರೂ ಟ್ವೀಟ್ ಮಾಡಿ, ಮಗಳು–ಅಳಿಯನ ಫೋಟೊ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಟ್ವೀಟ್ ಮಾಡಿರುವ ಅನಿಲ್ ಕಪೂರ್, ನನ್ನ ಜೀವನದ ಅತ್ಯಂತ ರೋಮಾಂಚನಕಾರಿ ಪಾತ್ರಕ್ಕೆ ತಯಾರಾಗುತ್ತಿದ್ದೇನೆ. ಅದೇನೆಂದರೆ, ತಾತನಾಗುತ್ತಿದ್ದೇನೆ.. ನಮ್ಮ ಜೀವನದಲ್ಲಿ ಅತ್ಯಂತ ಖುಷಿಯ ಸುದ್ದಿ ನೀಡಿರುವ ಸೋನಮ್ ಮತ್ತು ಆನಂದ್‌ಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಮೊದಲ ಮಗುವಿನ ನಿರೀಕ್ಷೆ: ಬೇಬಿ ಬಂಪ್ ಫೋಟೊ ಹಂಚಿಕೊಂಡ ನಟಿ ಸೋನಮ್ ಕಪೂರ್
ಸುನಿತಾ ಅವರು, ನನ್ನನ್ನು ಅಜ್ಜಿ ಎಂದು ಕರೆಯುವ ಆ ಕ್ಷಣಗಳಿಗಾಗಿ ಕಾತರಳಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಬೇಬಿ ಬಂಪ್ ಫೋಟೊ ಪೋಸ್ಟ್ ಮಾಡಿದ್ದ ಸೋನಮ್, ನಾಲ್ಕು ತಿಂಗಳ ಗರ್ಭಿಣಿಯಾಗಿರುವ ವಿಚಾರ ಬಹಿರಂಗಪಡಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.