ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಲಾನ್ ಗೋನಿ ಜತೆ ಅಮೆರಿಕ ಪ್ರವಾಸದಲ್ಲಿ ಸುಸಾನೆ ಖಾನ್

ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ ನಟ ಹೃತಿಕ್ ರೋಷನ್ ಅವರ ಜತೆಗಿನ ದಾಂಪತ್ಯ ಕೊನೆಗೊಳಿಸಿದ ಬಳಿಕ ಸುಸಾನೆ ಖಾನ್, ಅಸ್ಲಾನ್ ಗೋನಿ ಜತೆ ನಂಟು ಬೆಳೆಸಿಕೊಂಡಿದ್ದಾರೆ.

ಅತ್ತ, ಹೃತಿಕ್ ರೋಷನ್ ಕೂಡ ಸಬಾ ಆಜಾದ್ ಜತೆ ಪ್ರೇಮ ಸಂಬಂಧ ಹೊಂದಿದ್ದಾರೆ. ಅಲ್ಲದೆ, ಹೃತಿಕ್ ಮತ್ತು ಸುಸಾನೆ ಇಬ್ಬರೂ ತಾವು ಅಧಿಕೃತವಾಗಿ ಬೇರೆ ಬೇರೆಯಾಗಿರುವುದು ಮಾತ್ರವಲ್ಲದೆ, ತಮ್ಮ ಪ್ರೀತಿಯನ್ನು ಕಂಡುಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಹೃತಿಕ್ ಅವರ ಜತೆ ಸಬಾ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಸುಸಾನೆ ಖಾನ್ ಜತೆ ಅಸ್ಲಾನ್ ಗೋನಿ ಪ್ರವಾಸ, ಪಾರ್ಟಿ ಎಂದೆಲ್ಲ ಸುತ್ತಾಡುತ್ತಿರುತ್ತಾರೆ.

ಅಮೆರಿಕದಲ್ಲಿ ಅಸ್ಲಾನ್ ಗೋನಿ ಜೊತೆ ಪಾರ್ಟಿ ಮಾಡುತ್ತಿರುವ ಮತ್ತು ವಿಹಾರ ತಾಣಕ್ಕೆ ಹೋಗಿರುವ ಫೋಟೊ, ವಿಡಿಯೊಗಳನ್ನು ಸುಸಾನೆ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಲಾಸ್ ಏಂಜಲೀಸ್ ಮತ್ತು ಕ್ಯಾಲಿಫೋರ್ನಿಯಾದ ಸುಂದರ ತಾಣಗಳ ಚಿತ್ರ ಸುಸಾನೆ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅಭಿಮಾನಿಗಳ ಗಮನ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT