ಭಾನುವಾರ, ಸೆಪ್ಟೆಂಬರ್ 26, 2021
27 °C

ಡಿಸ್ನಿ+ ಆರಂಭ ಏನುಂಟು, ಏನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ ರಜೆಯಲ್ಲಿ ಮನೆಯಲ್ಲೇ ಇರಬೇಕಾದ ಸ್ಥಿತಿ ಇದೆ. ಈ ಹೊತ್ತಿನಲ್ಲಿ ಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ಒಂಚೂರು ಖುಷಿ ನೀಡಬಲ್ಲ ಸುದ್ದಿಯನ್ನು ಡಿಸ್ನಿ ಹೊತ್ತು ತಂದಿದೆ.

ಭಾರತದಲ್ಲಿ ಹಾಟ್‌ಸ್ಟಾರ್‌ ಒಟಿಟಿ ವೇದಿಕೆ ಜೊತೆ ಒಂದಾಗಿ ಡಿಸ್ನಿ ಸಂಸ್ಥೆಯು ‘ಡಿಸ್ನಿ+ಹಾಟ್‌ಸ್ಟಾರ್‌’ ಒಟಿಟಿ ವೇದಿಕೆಗೆ ಚಾಲನೆ ನೀಡಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಹಾಟ್‌ಸ್ಟಾರ್‌ ಬಳಕೆ ಮಾಡುತ್ತಿರುವವರ ಗಮನಕ್ಕೆ ಇದು ಈಗಾಗಲೇ ಬಂದಿದೆ. ಅವರ ಆ್ಯಪ್‌, ‘ಡಿಸ್ನಿ+ಹಾಟ್‌ಸ್ಟಾರ್‌’ ಎನ್ನುವ ಹೆಸರನ್ನು ಈಗಾಗಲೇ ಹೊತ್ತುಕೊಂಡಿದೆ.

ಹಾಟ್‌ಸ್ಟಾರ್‌ ಮತ್ತು ಡಿಸ್ನಿಯನ್ನು ಒಗ್ಗೂಡಿಸಿದ್ದಕ್ಕೆ ವಿವರಣೆ ನೀಡಿರುವ ಸಂಸ್ಥೆಯು ‘ಡಿಸ್ನಿಯ ಕಥೆಗಳ ಶಕ್ತಿ ಹಾಗೂ ಹಾಟ್‌ಸ್ಟಾರ್‌ನ ತಾಂತ್ರಿಕ ಅನುಭವವನ್ನು ಒಗ್ಗೂಡಿಸಿ ವೀಕ್ಷಕರಿಗೆ ನೀಡಿದಂತೆ ಆಗಿದೆ’ ಎಂದು ಹೇಳಿದೆ.

ಈ ಒಟಿಟಿ ವೇದಿಕೆ ಮೂಲಕ ವೀಕ್ಷಕರಿಗೆ ಆ್ಯನಿಮೇಷನ್ ಸಿನಿಮಾಗಳು, ಮಕ್ಕಳಿಗೆ ಸಂಬಂಧಿಸಿದ ಜನಪ್ರಿಯ ಕಾರ್ಯಕ್ರಮಗಳು, ಬಾಲಿವುಡ್‌ ಸಿನಿಮಾಗಳು, ಹಾಟ್‌ಸ್ಟಾರ್‌ನ ವಿಶೇಷ ಕಾರ್ಯಕ್ರಮಗಳು ಲಭ್ಯವಾಗಲಿವೆ.

ಎರಡು ಬಗೆಯ ಚಂದಾ: ಡಿಸ್ನಿ+ಹಾಟ್‌ಸ್ಟಾರ್‌ ಈಗ ಎರಡು ಬಗೆಯ ಚಂದಾ ಆಯ್ಕೆಗಳನ್ನು ನೀಡುತ್ತಿದೆ. ಮೊದಲನೆಯದು ವಿಐಪಿ ಚಂದಾ. ಇದನ್ನು ಆಯ್ಕೆ ಮಾಡಿಕೊಂಡರೆ, ಡಿಸ್ನಿಯವರ ಸಿನಿಮಾಗಳು, ಮಕ್ಕಳ ಮನರಂಜನಾ ಕಾರ್ಯಕ್ರಮಗಳು, ಭಾರತದ ಹೊಸ ಸಿನಿಮಾಗಳು, ಹಾಟ್‌ಸ್ಟಾರ್‌ ವಿಶೇಷ ಕಾರ್ಯಕ್ರಮಗಳು ಹಾಗೂ ಕ್ರೀಡಾಕೂಟಗಳ ನೇರ ಪ್ರಸಾರ ಲಭ್ಯವಿರಲಿದೆ.

ಪ್ರೀಮಿಯಂ ಚಂದಾ ಸೇವೆಯನ್ನು ಆಯ್ಕೆ ಮಾಡಿಕೊಂಡರೆ, ಮೇಲಿನವುಗಳ ಜೊತೆಯಲ್ಲೇ, ಅಮೆರಿಕದ ಕೆಲವು ಟಿ.ವಿ. ಕಾರ್ಯಕ್ರಮಗಳು, ಹಾಲಿವುಡ್ ಸಿನಿಮಾಗಳು ಕೂಡ ದೊರೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು