ಭಾನುವಾರ, ಜೂನ್ 26, 2022
22 °C

ಟ್ರೋಲ್‌ಗಳಿಗೆ ಹೆದರುವುದಿಲ್ಲ ಎಂದು ಮತ್ತಷ್ಟು ಫೋಟೊ ಪೋಸ್ಟ್ ಮಾಡಿದ ಇರಾ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್, ಕಳೆದ ವಾರ ಹುಟ್ಟುಹಬ್ಬ ಆಚರಿಸಿಕೊಂಡು ಸುದ್ದಿಯಾಗಿದ್ದರು.

ಹುಟ್ಟುಹಬ್ಬ ಆಚರಣೆಯ ಸಂದರ್ಭ ಪೂಲ್ ಪಾರ್ಟಿ ಆಯೋಜಿಸಿದ್ದು ಮತ್ತು ಬಿಕಿನಿ ಧರಿಸಿ ಕೇಕ್ ಕತ್ತರಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು.

25ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅಮೀರ್ ಖಾನ್, ರೀನಾ ದತ್ತಾ, ಕಿರಣ್ ರಾವ್ ಮತ್ತು ಇರಾ ಬಾಯ್‌ಫ್ರೆಂಡ್ ನೂಪುರ್ ಶಿಖರೆ ಕೂಡ ಪಾಲ್ಗೊಂಡಿದ್ದರು.

ಇರಾ ಖಾನ್, ಬಿಕಿನಿ ಧರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದನ್ನು ಸಾಮಾಜಿಕ ತಾಣಗಳಲ್ಲಿ ಹಲವರು ಟೀಕಿಸಿದ್ದರು. ಅಲ್ಲದೆ, ಹಲವು ಟ್ರೋಲ್‌ಗಳು ಕೂಡ ಸೃಷ್ಟಿಯಾಗಿದ್ದವು.

ಆದರೆ, ಜನರ ಕಾಮೆಂಟ್‌ಗಳಿಗೆ ಕ್ಯಾರೇ ಎನ್ನದ ಇರಾ ಖಾನ್, ಬಿಕಿನಿ ಧರಿಸಿಕೊಂಡು ಪೂಲ್ ಪಾರ್ಟಿಯಲ್ಲಿ ಕಳೆದ ಕ್ಷಣಗಳ ಮತ್ತಷ್ಟು ಫೋಟೊಗಳನ್ನು ಪೋಸ್ಟ್ ಮಾಡುವ ಮೂಲಕ ಟ್ರೋಲ್‌ಗಳ ಬಾಯಿಮುಚ್ಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು