ಗುರುವಾರ , ಆಗಸ್ಟ್ 18, 2022
27 °C

ತೂಕ ಏರಿಕೆಯಾಗಿದೆ ಎಂದು ಭುವನ ಸುಂದರಿ ಹರ್ನಾಜ್ ಸಂಧುಗೆ ಟ್ರೋಲ್‌ ಮಾಡಿದ ಜನರು!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Harnaaz Sandhu Instagram Post

ಬೆಂಗಳೂರು: ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಶೋ ಸ್ಟಾಪರ್ ಆಗಿ ಕಾಣಿಸಿಕೊಂಡ 2021ರ ಭುವನ ಸುಂದರಿ ಹರ್ನಾಜ್ ಸಂಧು ಅವರು ನೆಟ್ಟಿಗರ ಟ್ರೋಲ್‌ಗೆ ಒಳಗಾಗಿದ್ದಾರೆ.

ನರೇಶ್ ಮತ್ತು ಶಿವನ್ ಅವರು ವಿನ್ಯಾಸ ಮಾಡಿದ್ದ ಆಕರ್ಷಕ ಉಡುಪು ಧರಿಸಿ, ಫ್ಯಾಷನ್‌ ವೀಕ್‌ನಲ್ಲಿ ಹರ್ನಾಜ್ ಪಾಲ್ಗೊಂಡಿದ್ದರು.

ಶೋ ಕೊನೆಯಲ್ಲಿ ಅವರು ಆಗಮಿಸಿದ್ದು, ಅವರ ಫೋಟೊ ಮತ್ತು ವಿಡಿಯೊಗಳನ್ನು ಮಿಸ್ ಯುನಿವರ್ಸ್, ಎಫ್‌ಡಿಸಿಐ ಮತ್ತು ಲ್ಯಾಕ್ಮೆ ಫ್ಯಾಷನ್ ವೀಕ್ ಅಧಿಕೃತ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು.

ಫ್ಯಾಷನ್ ವೀಕ್‌ನಲ್ಲಿ ಶೋ ಸ್ಟಾಪರ್ ಆಗಿದ್ದ ಹರ್ನಾಜ್, ಗಾಂಭೀರ್ಯದಿಂದ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದರು.

ಆದರೆ ಅವರ ವಿಡಿಯೊ ಮತ್ತು ಫೋಟೊ ನೋಡಿರುವ ನೆಟ್ಟಿಗರು, ಹರ್ನಾಜ್ ಅವರು ದಪ್ಪಗಾಗಿದ್ದಾರೆ. ಇಷ್ಟೊಂದು ತೂಕ ಏರಿಕೆಯಾದರೆ ಹೇಗೆ ಎಂದೆಲ್ಲ ಕಾಮೆಂಟ್ ಮೂಲಕ ಪ್ರಶ್ನಿಸಿ ಟ್ರೋಲ್ ಮಾಡಿದ್ದಾರೆ.

ಆದರೆ ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳದ ಭುವನ ಸುಂದರಿ, ಮತ್ತೆ ಎಂದಿನಂತೆ ಕಾರ್ಯಕ್ರಮ ಮತ್ತು ಜಾಹೀರಾತು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು