ಗುರುವಾರ , ಜುಲೈ 29, 2021
23 °C

ಸಹೋದರರ ಮಾಹಿತಿಗಾಗಿ ಹೆಚ್ಚು ಗೂಗಲ್ ಆದ ನಟರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿನಿಮಾ ಹೀರೊಗಳ ಕುಟುಂಬದ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಆಸಕ್ತಿ. ತಮ್ಮ ನೆಚ್ಚಿನ ನಾಯಕ ನಟ, ನಟಿಯ ಅಪ್ಪ-ಅಮ್ಮ ಯಾರು, ಅಣ್ಣ-ತಂಗಿ ಯಾರು, ಎಂಬ ಪ್ರಶ್ನೆಗಳನ್ನು ಅವರು ‘ಗೂಗಲ್’ ದೇವತೆಯ ಬಳಿ ಆಗಾಗ ಕೇಳುತ್ತಲೇ ಇರುತ್ತಾರೆ.

ಗೂಗಲ್‌ನಲ್ಲಿ ದಕ್ಷಿಣ ಭಾರತದ ಯಾವೆಲ್ಲ ಹೀರೊಗಳ ಮಾಹಿತಿಯನ್ನು ಹೆಚ್ಚು ಹುಡುಕಲಾಗಿದೆ ಎಂಬ ವಿವರ ಇಲ್ಲಿದೆ:

ತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್‌ ಬಾಬು ಅವರ ಸಹೋದರಿಯರ ಬಗ್ಗೆ ಗೂಗಲ್‌ ಮೂಲಕ ಅಭಿಮಾನಿಗಳು ಹುಡುಕಾಟ ನಡೆಸಿದ್ದಾರೆ. ಅವರಿಗೆ ಮೂವರು ಸಹೋದರಿಯರು. ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಈ ಸಹೋದರಿಯರು ಮಹೇಶ್‌ ಬಾಬು ಅವರ ಪ್ರಮುಖ ಕೆಲಸಗಳಲ್ಲಿ ಸಲಹೆ ನೀಡುತ್ತಾ ಜತೆ ನಿಲ್ಲುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಹೇಶ್‌ ಬಾಬು ಎಲ್ಲಾ ಪೋಸ್ಟ್‌ಗಳಿಗೂ ಕಮೆಂಟ್‌ ಮಾಡುತ್ತಾ ಹಾರೈಸುವ, ಗೇಲಿ ಮಾಡುವ ಟೀಂ ಈ ಸಹೋದರಿಯರದ್ದು.

ಅಕ್ಕ ಪದ್ಮಾವತಿ ಅವರು ರಾಜಕಾರಣಿ ಗಲ್ಲಾ ಜಯದೇವ್ ಅವರನ್ನು ವಿವಾಹವಾಗಿದ್ದಾರೆ. ಎರಡನೇ ಅಕ್ಕ ಮಂಜುಳಾ ನಿರ್ಮಾಪಕರಾಗಿದ್ದು, ನಟ ಸಂಜಯ್ ಸ್ವರೂಪ್ ಅವರನ್ನು ವಿವಾಹವಾದರು. ತಂಗಿ ಪ್ರಿಯದರ್ಶಿನಿ ನಟ ಸುಧೀರ್ ಬಾಬು ಅವರನ್ನು ವರಿಸಿದ್ದಾರೆ.

ಚಂದನವನದ ರಾಕಿ ಭಾಯ್ ಯಶ್ ಅವರ ಸಹೋದರಿ ನಂದಿನಿ ಬಗ್ಗೆ ಅಭಿಮಾನಿಗಳು ಗೂಗಲ್‌ ಮಾಡಿದ್ದಾರೆ. ತುಂಬಾ ಆತ್ಮೀಯ ನಂಟು ಯಶ್–ನಂದಿನಿ ಅವರದ್ದು. ಕಳೆದ ರಕ್ಷಾಬಂಧನದಂದು ‘ಈ ರಾಕಿ ಇರೋವರೆಗೂ ಯಾವುದಕ್ಕು ಚಿಂತೆ ಮಾಡಬೇಡ; ನೀನು ಕಟ್ಟಿರುವ ಈ ರಾಕಿ ಇರೋವರೆಗೂ ನನಗೂ ಚಿಂತೆ ಇಲ್ಲ’ ಎಂದು ನಂದಿನಿ ಅವರೊಂದಿಗಿನ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು.

ಮೂರನೆಯದಾಗಿ ಹೆಚ್ಚು ಗೂಗಲ್ ಆಗಿರುವವರು ಸಾಯಿ ಪಲ್ಲವಿ. ಇವರ ತಂಗಿ ಕುರಿತು ಗೂಗಲ್ ಶೋಧ ನಡೆಸಿದ್ದಾರೆ ಅಭಿಮಾನಿಗಳು. ತಂಗಿ ಪೂಜಾ ಕಣ್ಣನ್ ಕೂಡ ನಟಿ. 2018ರಲ್ಲಿ ತಮಿಳಿನ ಕಿರುಚಿತ್ರದಲ್ಲಿ ಅಭಿನಯಿಸಿದ್ದರು. ತುಂಟ ತಂಗಿಯೊಂದಿಗಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ ಪಲ್ಲವಿ. ಇವರಿಬ್ಬರ ಮುದ್ದಾದ ಫೋಟೊಗಳು ಎಲ್ಲರ ಹೃದಯ ಗೆದ್ದಿದ್ದವು. 

ರಾನಾ ದಗ್ಗುಬಾಟಿ ಅವರ ತಂಗಿ ಮಾಳವಿಕಾ ಕೂಡ ಗೂಗಲ್‌ನಲ್ಲಿ ಹುಡುಕಲ್ಪಟ್ಟವರು. ಯಾವುದೇ ವಿಷಯವಿದ್ದರೂ ಮುಚ್ಚುಮರೆಯಿಲ್ಲದೆ ತಂಗಿಯೊಂದಿಗೆ ಹಂಚಿಕೊಳ್ಳುತ್ತಾರೆ ರಾನಾ. ತಮ್ಮ ಪ್ರೇಯಸಿ ಮಿಹಿಕಾ ಬಜಾಜ್ ಅವರ ವಿಷಯ ಮೊದಲು ತಿಳಿಸಿದ್ದು ತಂಗಿಯೊಂದಿಗೆ.

ಮಾಲಿವುಡ್ ಹೀರೊ ದುಲ್ಕರ್ ಸಲ್ಮಾನ್ ಅವರ ಅಕ್ಕ ಕುಟ್ಟಿ ಸುರುಮಿ. ಹೊರಗೆಲ್ಲೂ ಹೆಚ್ಚು ಕಾಣಿಸಿಕೊಳ್ಳದ ಇವರು, ದುಲ್ಕರ್‌ ಶ್ರೇಯಸ್ಸು ಬಯಸಿ ಸದಾ ಅವರ ಬೆನ್ನಿಗೆ ನಿಂತವರು. ಸಂದರ್ಶನಗಳಲ್ಲಿ ತಮ್ಮ ಕುಟುಂಬದ ಬಗ್ಗೆ ಹೇಳಿಕೊಳ್ಳುವ ಪ್ರಸಂಗ ಬಂದರೆ, ‘ತಾಯಿಯಾಗಿ ನನ್ನ ನೋಡಿಕೊಂಡಿದ್ದಾರೆ. ನನ್ನ ತುಂಟತನದಿಂದ ಆಕೆಗೆ ಚೆನ್ನಾಗಿ ಸಿಟ್ಟು ಬರಿಸಿ ಪೆಟ್ಟು ತಿಂದಿದ್ದೇನೆ’ ಎನ್ನುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು