ಬೆಂಗಳೂರು: ಸಿನಿಮಾದ ಬಿಡುವಿನ ವೇಳೆಯಲ್ಲಿ ಪ್ರವಾಸ ಹೋಗುವುದು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗಾಗಿ ಫೋಟೊ, ವಿಡಿಯೊ ಪೋಸ್ಟ್ ಮಾಡುವುದು ಎಂದರೆ ಬಾಲಿವುಡ್ ನಟಿಯರಿಗೆ ಅಚ್ಚುಮೆಚ್ಚು..
ನಟಿ ಮತ್ತು ರೂಪದರ್ಶಿ ನೋರಾ ಫತೇಹಿ, ದುಬೈ ಪ್ರವಾಸಕ್ಕೆ ತೆರಳಿದ್ದಾರೆ.
ದುಬೈನ ಹೋಟೆಲ್ ಒಂದರ ಈಜುಕೊಳದಲ್ಲಿ ವಿಹರಿಸುತ್ತಾ ನೋರಾ, ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶಿಷ್ಟ ಶೈಲಿಯ ನೃತ್ಯಕ್ಕೆ ನೋರಾ ಫತೇಹಿ ಹೆಸರುವಾಸಿ. ಆಕೆ ಸಿನಿಮಾದಲ್ಲಿ ನಟಿಸುತ್ತಾರೆ ಎಂದಾದರೆ, ಅಲ್ಲೊಂದು ಡ್ಯಾನ್ಸ್ ಇದ್ದೇ ಇರುತ್ತದೆ.
ಬಾಲಿವುಡ್ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್‌ನಲ್ಲಿಯೂ ಕಾಣಿಸಿಕೊಳ್ಳುವ ನೋರಾ, ಫ್ರೆಂಡ್ಸ್ ಜತೆ ದುಬೈ ಪ್ರವಾಸ ತೆರಳಿದ್ದು, ಅಲ್ಲಿ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ. ಅದರ ಫೋಟೊಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.