ಬೆಂಗಳೂರು: ದುಬೈಗೆ ಪ್ರವಾಸ ತೆರಳಿದ್ದ ನಟಿ ನೋರಾ ಫತೇಹಿ, ಅಲ್ಲಿನ ವಿಲಾಸಿ ಹೋಟೆಲ್ ಒಂದರ ಈಜುಕೊಳದಲ್ಲಿ ಇರುವ ಫೋಟೊಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದರು.
ಅಲ್ಲದೆ, ಮುಂದಿನ ಪ್ರವಾಸಕ್ಕೆ ರೆಡಿಯಾಗುತ್ತಿದ್ದು, ಯಾರೆಲ್ಲ ವಿಹಾರಕ್ಕೆ ಬರುತ್ತೀರಿ ಎಂದು ಅಭಿಮಾನಿಗಳನ್ನು ಕೇಳಿದ್ದರು.
ಈ ಬಾರಿ ನೋರಾ ಅವರು, ಅಪರೂಪದ ಎರಡು ಬಿಳಿ ಸಿಂಹಗಳ ಜತೆ ಗಾಂಭೀರ್ಯದಿಂದ ಕುಳಿತುಕೊಂಡಿರುವ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ದುಬೈ ಪ್ರವಾಸದ ಸಂದರ್ಭ ಅವರು ಅಲ್ಲಿನ ಮೃಗಾಲಯಕ್ಕೆ ತೆರಳಿದ್ದಾರೆ.
ಅಲ್ಲಿರುವ ಬಿಳಿ ಸಿಂಹಗಳ ಜತೆ ಫೋಟೊ ತೆಗೆಸಿಕೊಂಡು, ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಂಹಗಳ ಜತೆ ಯಾವುದೇ ಅಳುಕಿಲ್ಲದೇ ಕುಳಿತಿರುವ ನಟಿಯ ಧೈರ್ಯವನ್ನು ಅವರ ಅಭಿಮಾನಿಗಳು ಕೊಂಡಾಡಿದ್ದಾರೆ. ಅಲ್ಲದೆ, ಇನ್‌ಸ್ಟಾಗ್ರಾಮ್‌ನಲ್ಲಿ ವಾಹ್ ಎಂದು ಕಾಮೆಂಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.