ಮಂಗಳವಾರ, ಜನವರಿ 25, 2022
25 °C

ಪ್ರಿಯಕರನ ಫೋಟೊ ಹಂಚಿಕೊಂಡ ಮಸಾಬಾ ಗುಪ್ತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ನಲ್ಲಿ ಸೋನಮ್‌ ನಾಯರ್‌ ನಿರ್ದೇಶನದ 'ಮಸಾಬಾ ಮಸಾಬಾ' ಎಂಬ ಅಮ್ಮ-ಮಗಳ ಸರಣಿ ಕಾರ್ಯಕ್ರಮದ ಮೂಲಕ ಜನಮನ ಸೆಳೆದಿರುವ ಸೆಲೆಬ್ರಿಟಿ ಫ್ಯಾಶನ್‌ ಡಿಸೈನರ್‌ ಮಸಾಬಾ ಗುಪ್ತ ಅವರು ತಮ್ಮ ಪ್ರಿಯಕರನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪ್ರಿಯಕರ ಸತ್ಯದೀಪ್‌ ಮಿಶ್ರಾ ಅವರ ಫೋಟೊವನ್ನು ಶೇರ್‌ ಮಾಡಿ, ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. 

ಮಸಾಬಾ ಅವರು ಖ್ಯಾತ ನಟಿ ನೀನಾ ಗುಪ್ತಾ ಅವರ ಮಗಳು.  ನೀನಾ ಗುಪ್ತ ಅವರು 'ಸಚ್‌ ಕಹುನ್‌ ತೊ’ ಎಂಬ ಆತ್ಮಕತೆಯನ್ನು ಬರೆದಿದ್ದಾರೆ. ಈ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿ ಹೆಚ್ಚು ಜನಪ್ರಿಯವಾಗಿದೆ.

ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ತಂಡದ ಹೆಸರಾಂತ ಮಾಜಿ ಆಟಗಾರ ವಿವಿಯನ್‌ ರಿಚರ್ಡ್ಸ್‌ ಜೊತೆ ಪ್ರೇಮದಲ್ಲಿದ್ದ ನೀನಾ ಗುಪ್ತಾ ಮದುವೆಗೂ ಮುನ್ನ ಮಸಾಬಾ ಅವರಿಗೆ ಜನ್ಮ ನೀಡಿದ್ದರು.

ವಿವಿಯನ್‌ ರಿಚರ್ಡ್ಸ್‌ ಮೊದಲೇ ವಿವಾಹಿತರಾಗಿದ್ದರಿಂದ ಮಗುವನ್ನು ಒಬ್ಬಳೇ ಬೆಳೆಸುವ ಗಟ್ಟಿ ನಿರ್ಧಾರಕ್ಕೆ ಬಂದರು. ವಿವಾಹಿತರಾಗದೆ ಮಗುವಿಗೆ ಜನ್ಮ ನೀಡಿ, ಆಕೆಯನ್ನು ಓರ್ವಳೇ ಬೆಳೆಸಿ, ಭಾರತದ ಖ್ಯಾತ ಫ್ಯಾಶನ್‌ ಡಿಸೈನರ್‌ ರನ್ನಾಗಿ ಮಾಡಿದ ನೀನಾ ಗುಪ್ತಾ ಬದುಕು ಸ್ಪೂರ್ತಿಯುತವಾಗಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು